RIPPONPETE ; ವ್ಯಕ್ತಿ ಹೋದರು ವ್ಯಕ್ತಿತ್ವ ಉಳಿಯ ಬೇಕು. ಇದು ಸಮಾಜಕ್ಕೆ ನಾವು ನೀಡುವ ಕೊಡುಗೆ. ಉಸಿರಿರುವಾಗ ಹಸಿರಾದ ಕೆಲಸವನ್ನು ನಾವು ಮಾಡಬೇಕು. ಬದಲಾವಣೆ ಜಗದ ನಿಯಮ. ಸ್ಥಳ ಬದಲಾದರೂ ವ್ಯಕ್ತಿತ್ವ ಬದಲಾಗಬಾರದು. ಶಿಕ್ಷಕ ಸಮಾಜಮುಖಿಯಾಗಿದ್ದರೆ. ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತದೆಂಬುದಕ್ಕೆ ಕಳೆದ 26 ವರ್ಷಗಳ ಕಾಲ ಸರ್ಕಾರಿ ಶಾಲಾ ಶಿಕ್ಷಕ ವೃತ್ತಿಗೆ ಸೇರಿ ಒಂದೇ ಶಾಲೆಯಲ್ಲಿದ್ದು ವಿದ್ಯಾರ್ಥಿ ಪೋಷಕರ ಪ್ರೀತಿ ವಿಶ್ವಾಸಗಳಿಸುವ ಮೂಲಕ ನಮ್ಮೂರ ಮಗನೆಂಬ ಭಾವನೆಯಲ್ಲಿ ಶಿಕ್ಷಕನನ್ನ ಮತ್ತು ಅವರ ತಂದೆಯನ್ನು ಗೌರವಿಸಿ ಸತ್ಕರಿಸುವ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.
ಕಡಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಕಳೆದ 26 ವರ್ಷಗಳಿಂದ ಒಂದೇ ಶಾಲೆಯಲ್ಲಿದ್ದು ಈಗ ವರ್ಗಾವಣೆಗೊಂಡಿರುವ ಶಿಕ್ಷಕ ಧರಣೇಶ ಗುಡ್ಡೇಹಳ್ಳಿಯವರಿಗೆ ವಿದ್ಯಾರ್ಥಿ ವೃಂದ ಪೋಷಕ ಬಳಗ ಹಾಗೂ ಹಳೆ ವಿದ್ಯಾರ್ಥಿಗಳು ಆಯೋಜಿಸಲಾದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, 99 ಒಳ್ಳೆಯ ಕೆಲಸ ಮಾಡಿದರೂ ಒಂದು ತಪ್ಪು ಮಾಡಿದರೆ ಅದನ್ನೆ ಜನ ವೈಭವಿಕರಿಸುವ ಇಂದಿನ ದಿನಮಾನದಲ್ಲಿ ನಮ್ಮ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಒತ್ತಡದ ಕಾರ್ಯದಲ್ಲಿಯೂ ಶಾಲೆಯ ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಪ್ರೀತಿ ವಿಶ್ವಾಸಗಳಿಸುತ್ತಾ ತಮ್ಮ ಕಾಯಕ ನಿಷ್ಟೆಯಲ್ಲಿ ಪ್ರಾಮಾಣಿಕ ಸೇವೆಯನ್ನು ಗುರುತಿಸಿಕೊಂಡಿರುವ ಬಗ್ಗೆ ಸಭೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂಬುದಕ್ಕೆ ಗ್ರಾಮಸ್ಥರುಗಳೇ ಸಾಕ್ಷಿಯಾಗಿದೆ. ಪೋಷಕರ ಮತ್ತು ಗ್ರಾಮಸ್ಥರ ಸಹಕಾರವಿದ್ದರೇ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಇಲ್ಲಿನ ಶಿಕ್ಷಕ ಧರಣೇಶ್ ಕಾರಣವೆಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಕಮಲಾಕರ ವಹಿಸಿದ್ದರು. ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಮುಖ್ಯೋಪಾಧ್ಯಾಯ ಧರಣೇಶ ಗುಡ್ಡೇಹಳ್ಳಿ ಹಾಗೂ ಶಿಕ್ಷಕರ ತಂದೆ ನಿವೃತ್ತ ಶಿಕ್ಷಕರನ್ನು ವಿದ್ಯಾರ್ಥಿ ಪೋಷಕರು ಗ್ರಾಮಸ್ಥರು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಟ್ಟರು.
ಹುಂಚ ಗ್ರಾಮ ಪಂಚಾಯತ್ ಸದಸ್ಯರಾದ ಸರೋಜ ನವೀನಗೌಡ, ಶ್ರೀಧರ ಸುಣಕಲ್, ಇಸಿಓ ಕರಿಬಸಪ್ಪ, ತಾಲ್ಲೂಕು ನೌಕರರ ಸಂಘದ ಗೌರವಾಧ್ಯಕ್ಷ ಜಗದೀಶ ಕಾಗಿನಲ್ಲಿ, ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ನಾಗರಾಜ, ಶಿವಮೊಗ್ಗ ವಕೀಲ ದೇವೇಂದ್ರ, ಗುತ್ತಿಗೆದಾರ ಬಿಲ್ಲೇಶ್ವರ ನಾಗರಾಜರೆಡ್ಡಿ, ವಿದ್ಯಾರ್ಥಿಗಳಾದ ಶಿವರಾಜ್, ಶ್ರೀಧರ, ಸರೋಜ, ಸರಸ್ವತಿ,ದೇವರಾಜ್, ಚೈತ್ರಾ, ಶಿಕ್ಷಕ ಶಿವಕುಮಾರ್, ಸುಮ, ಗ್ರಾಮದ ಹಿರಿಯರಾದ ಗಿರಿಯಪ್ಪಗೌಡ, ಷಣ್ಮುಖಪ್ಪ, ಹಿರಿಯ ವಿದ್ಯಾರ್ಥಿ ಬಳಗ, ಎಸ್.ಡಿ.ಎಂ.ಸಿ.ಸದಸ್ಯರು ಕಡಸೂರು, ನಾಗರಹಳ್ಳಿ, ಹುಂಚ ಸುತ್ತಮುತ್ತಲಿನ ಶಿಕ್ಷಕರು ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಶಿವಕುಮಾರ ಸ್ವಾಗತಿಸಿ, ನಿರೂಪಿಸಿದರು. ಅತಿಥಿ ಶಿಕ್ಷಕಿ ಕು|| ರಿಷಿಕಾ ವಂದಿಸಿದರು.