ಹೊಸನಗರ ; ಇಲ್ಲಿನ ಉಪವಿಭಾಗದಲ್ಲಿ ಇಂದು (ಜ. 04) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಸಾಗರ 110/33/11 ಕೆ.ವಿ ಉಪವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾರ್ಯ ಇರುವುದರಿಂದ ಸಾಗರದಿಂದ ಹೊಸನಗರಕ್ಕೆ ಬಂದಿರುವ ಸಾಗರ-ಹೊಸನಗರ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಇರಲ್ಲ.

ಎಲ್ಲೆಲ್ಲಿ ಕರೆಂಟ್ ಇರಲ್ಲ !
ಜೇನಿ, ಮಾರುತಿಪುರ, ರಾಮಚಂದ್ರಾಪುರ, ಮೇಲಿನಬೆಸಿಗೆ, ಸೊನಲೆ ಗ್ರಾಮ ಪಂಚಾಯ್ತಿ ಮತ್ತು ಹೊಸನಗರ ಟೌನ್ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಆದ್ದರಿಂದ ಹೊಸನಗರ ಉಪವಿಭಾಗದ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.

