ಅಪ್ರಾಪ್ತನಿಂದ ಬೈಕ್ ಚಾಲನೆ, ತಂದೆಗೆ 25 ಸಾವಿರ ರೂ. ದಂಡ !

Written by malnadtimes.com

Published on:

THIRTHAHALLI | ಡಿಎಲ್ (Driving Licence) ಇಲ್ಲದೆ ಅಪ್ರಾಪ್ತನಿಂದ ಬೈಕ್ (Bike) ಚಾಲನೆ ಮಾಡಿದಕ್ಕೆ ಆತನ ತಂದೆಗೆ ತೀರ್ಥಹಳ್ಳಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ (Court) 25 ಸಾವಿರ ರೂ. ದಂಡ (Penalty) ವಿಧಿಸಿದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಘಟನಾ ವಿವರ :

ತೀರ್ಥಹಳ್ಳಿ ಠಾಣೆ ಪಿಎಸ್ಐ ಶಿವನಗೌಡ ಅವರು ಜೂ. 19ರಂದು ಇಲ್ಲಿನ ದೊಡ್ಮನೆಕೇರಿಯ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಬಾಲಕ ಡಿಎಲ್ ಇಲ್ಲದೇ ಬೈಕ್ ಚಲಾಯಿಸಿಕೊಂಡು ಬಂದು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ.

ಬಾಲಕನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಆತನ ತಂದೆ, ದೊಡ್ಮನೆ ಕೇರಿ ನಿವಾಸಿ ಮೊಹಮ್ಮದ್ ಹಯಾನ್ (42) ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಬಾಲಕನ ತಂದೆ ಮೊಹಮ್ಮದ್ ಹಯಾನ್ ಅವರಿಗೆ 25 ಸಾವಿರ ರೂ.ದಂಡ ವಿಧಿಸಿದ್ದಾರೆ.

Gruha lakshmi:ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮ್ಮ ಖಾತೆ ಸೇರಲಿದೆ ಗೃಹಲಕ್ಷ್ಮಿ 11 ನೇ ಕಂತಿನ ಹಣ

Ration card:ನೀವು ಈ ರೀತಿಯ ತಪ್ಪುಗಳನ್ನ ಮಾಡಿದರೆ ರದ್ದಾಗಲಿದೆ ನಿಮ್ಮ ಪಡಿತರ ಚೀಟಿ

Leave a Comment