ಒತ್ತುವರಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಗಳ ಮಾರಣಹೋಮ ; ಪ್ರಕರಣ ದಾಖಲು

Written by Mahesha Hindlemane

Published on:

ರಿಪ್ಪನ್‌ಪೇಟೆ ; ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುತ್ತಳ್ಳಿ ಗ್ರಾಮದ ಸರ್ವೇ ನಂ 31ರ ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಕಂದಾಯ ಭೂಮಿಯನ್ನು ಒತ್ತುವರಿ ಮಾಡುವ ನೆಪದಲ್ಲಿ ಸ್ಥಳದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನೂರಾರು ಮರ-ಗಿಡಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಅರಸಾಳು ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹುತ್ತಳ್ಳಿ ಗ್ರಾಮದ ಸರ್ವೇ ನಂ 31ರಲ್ಲಿ ಕಂದಾಯ ಭೂಮಿಯಲ್ಲಿದ್ದ ನೈಸರ್ಗಿಕ ಅರಣ್ಯವನ್ನು ಕಡಿದು ನಾಶಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ದೇವರಾಜ್ ಎಂಬುವರ ಮೇಲೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸುಮಾರು 4 ಎಕರೆ ಪ್ರದೇಶದಲ್ಲಿದ್ದ ಬೆಲೆ ಬಾಳುವ ಮತ್ತಿ, ಹೊನ್ನೆ, ಹುಣಾಲು, ಜಂಬೆ ಇನ್ನಿತರ ಕಾಡು ಜಾತಿ ಮರಗಳನ್ನು ಕಡಿಯಲಾಗಿದ್ದು ಮರದ ಬುಡಗಳಿಗೆ ಬೆಂಕಿಯಿಟ್ಟು ಸುಡಲಾಗಿದ್ದ ಮಾಹಿತಿಯನ್ನಾದರಿಸಿ ಸ್ಥಳಕ್ಕೆ ಪರಿಸರವಾದಿ ಗಿರೀಶ್ ಆಚಾರ್ ಹಾಗೂ ತಂಡ ಅರಣ್ಯ ಇಲಾಖೆಯ ಗಮನಕ್ಕೆ ತರುವ ಮೂಲಕ ಅರಣ್ಯ ನಾಶದ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಂದಾಯ ಭೂಮಿಯಾದ್ದರಿಂದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿರುವುದಾಗಿ ತಿಳಿದು ಬಂದಿದೆ.

ಸ್ಥಳದಲ್ಲಿ ಅರಸಾಳು ಆರ್.ಎಫ್.ಓ ಶರಣಪ್ಪ, ಡಿ.ಆರ್.ಎಫ್.ಓ ಮಂಜುನಾಥ, ಅರಣ್ಯ ರಕ್ಷಕ ಸಂತೋಷ ಇನ್ನಿತರರು ಹಾಜರಿದ್ದರು.

Leave a Comment