ಶಾಸಕ ಗೋಪಾಲಕೃಷ್ಣ ಬೇಳೂರು ಮೇಲೆ ಅನಗತ್ಯ ಆರೋಪ ಸಲ್ಲ ; ಕಲಗೋಡು ರತ್ನಾಕರ್

Written by Mahesh Hindlemane

Updated on:

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಸಮುದಾಯ ಭವನಕ್ಕೆ ಹಿಂದಿನ ಸರ್ಕಾರದ ಶಾಸಕ ಹರತಾಳು ಹಾಲಪ್ಪ ಸರ್ಕಾರದಿಂದ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆ ಮಾಡಿಸಿರುವುದಾಗಿ ಹೇಳಿ ಆ ಹಣ ಪುನಃ ಸರ್ಕಾರಕ್ಕೆ ವಾಪಾಸ್ ಹೋಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಅರೋಪಿಸಿರುವ ಬಗ್ಗೆ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತೀವ್ರವಾಗಿ ಖಂಡಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಶಾಸಕ ಹರತಾಳು ಹಾಲಪ್ಪನವರ ಬಳಿ ತೆರಳಿ ದೇವಸ್ಥಾನಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾದರೂ ಕೂಡ ಒಂದು ನಯಾ ಪೈಸೆ ಬಿಡುಗಡೆ ಮಾಡದೆ ಕಮಿಟಿಯನ್ನು ಬದಲಾವಣೆ ಮಾಡಿದರು. ಅದಕ್ಕೂ ಮುನ್ನ ನಮ್ಮ ವ್ಯವಸ್ಥಾಪನಾ ಸಮಿತಿಯಲ್ಲಿ ಸುಮಾರು 58 ಲಕ್ಷ ರೂ. ಹಣದಿಂದ ಶಿಲಾಮಯ ದೇವಸ್ಥಾನಕ್ಕೆ ನೀಲನಕ್ಷೆ ತಯಾರಿಸಿ ದೇಗುಲಕ್ಕೆ ಬೇಕಾಗುವಂತಹ ಕಾಮಗಾರಿ ಕೆಲಸ ಮಾಡಿದ್ದರು ಕೂಡಾ ಬರೀ ಸುಳ್ಳು ಹೇಳಿಕೊಂಡು ಸರ್ಕಾರದಿಂದ 1 ಕೋಟಿ ರೂ. ಹಣವನ್ನು ನೀರಾವರಿ ನಿಗಮದಿಂದ ಬಿಡುಗಡೆ ಮಾಡಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಬರೀ ಸುಳ್ಳು ಹೇಳಿಕೆಯಿಂದ ಜನರನ್ನು ನಂಬಿಸುವುದನ್ನು ಬಿಟ್ಟು ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರುರವರು 51 ಕೋಟಿ ರೂ. ಹಣವನ್ನು ವಿವಿಧ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಮಳೆಗಾಲದ ಕಾರಣ ಕಾಮಗಾರಿ ಪ್ರಾರಂಭಿಸುವುದು ವಿಳಂಬವಾಗಿದೆ ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ಮಾಜಿ ಶಾಸಕ ಹರತಾಳು ಹಾಲಪ್ಪ ನಮ್ಮ ಸರ್ಕಾರದ ಅನುದಾನದಿಂದ ನಡೆಸಲಾಗುತ್ತಿದೆ ಎಂದು ಸುಳ್ಳು ಹೇಳಿಕೊಂಡು ಗೋಪಾಲಕೃಷ್ಣ ಬೇಳೂರು ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.

ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ ಮಾತನಾಡಿ, ಅಮ್ಮನಘಟ್ಟ ದೇವಸ್ಥಾನದ ವಿಚಾರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ದ ಅನಗತ್ಯವಾಗಿ ಅರೋಪ ಮಾಡುವುದನ್ನು ಸಹಿಸುವುದಿಲ್ಲ. ಅನವಶ್ಯಕವಾಗಿ ಸಿಗಂದೂರು-ಅಮ್ಮನಘಟ್ಟ ವಿಚಾರವಾಗಿ ಸಲ್ಲದ ಆರೋಪ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದರು.

ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ನಿರಾವರಿ ನಿಗಮದಿಂದ ಜೇನುಕಲ್ಲಮ್ಮ ದೇವಸ್ಥಾನದ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿ ಆ ಅನುದಾನವನ್ನು ನಮ್ಮ ಶಾಸಕರು ಪತ್ರ ಬರೆದು ವಾಪಾಸ್ ಕಳುಹಿಸಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಆದರೆ ಸರ್ಕಾರ ನೀರಾವರಿ ನಿಗಮಕ್ಕೆ ಹೊರತು ಬೇರೆಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದಂತೆ ನಿಗಮಕ್ಕೆ ಸುತ್ತೋಲೆ ಹೊರಡಿಸಿರುವುದರ ಬಗ್ಗೆ ಪ್ರದರ್ಶಿಸಿದರು. ಆದರೆ ಮಾಜಿ ಶಾಸಕ ಹರತಾಳು ಹಾಲಪ್ಪ ಗೋಪಾಲಕೃಷ್ಣ ಬೇಳೂರು ವಿರುದ್ದ ಅನಾವಶ್ಯಕವಾಗಿ ಟೀಕೆ ಮಾಡುವುದರ ಬಗ್ಗೆ ನಿಲ್ಲಿಸುವಂತೆ ಹೇಳಿ ಶಾಸಕರು ಈಗಾಗಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪಗೌಡ ಹಾರೋಹಿತ್ತಲು, ಗ್ರಾಮ ಪಂಚಾಯಿತ್ ಸದಸ್ಯರಾದ ಡಿ.ಈ.ಮಧುಸೂದನ್, ಗಣಪತಿ, ಆಸಿಫ್‌ಭಾಷಾ, ಗ್ಯಾರಂಟಿ ಸಮಿತಿಯ ಅಮ್ಮಿರ್‌ಹಂಜಾ, ರವೀಂದ್ರ ಕೆರೆಹಳ್ಳಿ, ನವೀನ ಕೆರೆಹಳ್ಳಿ, ಬಿ.ಎಸ್.ಎನ್.ಎಲ್, ಶ್ರೀಧರ, ಪ್ರಕಾಶ್ ಪಾಲೇಕರ್, ಪರಮೇಶ್ ಇನ್ನಿತರರು ಹಾಜರಿದ್ದರು.

Leave a Comment