ರಿಪ್ಪನ್‌ಪೇಟೆ ; ಮಕ್ಕಳು ಓದಿನೊಂದಿಗೆ ವ್ಯವಹಾರಿಕಾ ಜ್ಞಾನ ಬೆಳೆಸಿಕೊಳ್ಳಲು ಸರ್ಕಾರ ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿದ್ದು ಅದರಂತೆ ಗವಟೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಯಶಸ್ವಿಯಾಗಿ ನಿರ್ವಹಣೆ ಮಾಡುವ ಮೂಲಕ ಮಕ್ಕಳ ಪೋಷಕವರ್ಗ ಸಹ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿರುವುದು ಸಂತೋಷ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ ಹೇಳಿದರು.


ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಓದಿನೊಂದಿಗೆ ಹಣಕಾಸಿನ ವ್ಯವಹಾರವನ್ನು ಹೇಗೆ ನಿರ್ವಹಣೆ ಮಾಡಬೇಕೆಂಬ ಬಗ್ಗೆ ಜಾಗೃತಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಮಕ್ಕಳ ಸಂತೆ ಬಹಳ ಯಶಸ್ವಿಯಾಗುತ್ತಿದ್ದು ಇದರಿಂದ ಮಕ್ಕಳ ಪೋಷಕರು ತಮ್ಮ ಮಕ್ಕಳ ಆರ್ಥಿಕ ಜ್ಞಾನದ ಕುರಿತು ಅರಿಯಲು ಸಾದ್ಯವಾಗಿದೆ ಎಂದರು.


ಎಸ್.ಡಿ.ಎಂ.ಸಿ. ಅಧ್ಯಕ್ಷ ಸೀತಾರಾಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ, ಮಂಜುಳಾ ಕೇತಾರ್ಜಿ, ಗಣಪತಿ ಗವಟೂರು, ಪ್ರದೀಪ, ಶಾಲಾ ಮುಖ್ಯೋಪಾಧ್ಯಾಯ ಗಂಗಾನಾಯ್ಕ್, ಶಿರೋಮಣಿ, ಶಿಕ್ಷಕರಾದ ರವಿಕುಮಾರ್, ಕು|| ರಂಜಿತಾ, ಕು|| ನಂದಿನಿ, ಚಂದ್ರಮೋಹನ್, ತಾಲ್ಲೂನ್ ನೌಕರ ಸಂಘದ ಉಪಾಧ್ಯಕ್ಷ ಶಿವಮೂರ್ತಿ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕ ವರ್ಗ ಹಾಜರಿದ್ದರು.
ಲೇಖನವನ್ನು ಮುಂದುವರಿಸಿ ಓದಿ



