ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಕಂದಕಕ್ಕೆ ಬಿದ್ದು ಪ್ರವಾಸಿಗ ಸಾವು !

Written by malnadtimes.com

Published on:

Tharikere | ಪ್ರವಾಸಕ್ಕೆ ಬಂದ ವೇಳೆ ಹೆಬ್ಬೆ ಜಲಪಾತದ (Hebbe WaterFalls) ಬಳಿ ಇದ್ದ ಅಪಾಯಕಾರಿ ಬಂಡೆಯೊಂದರ ಮೇಲೆ ನಿಂತು ಸೆಲ್ಫಿ (Selfie) ತೆಗೆದುಕೊಳ್ಳುವಾಗ ಹೈದರಾಬಾದ್ (Hyderabad) ಮೂಲದ ಯುವಕನೊಬ್ಬ ಕಾಲುಜಾರಿ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ಬಳಿ ಸೋಮವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

Read More:Shivamogga Rain |  ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ?

Hebbe Falls

ಹೈದರಾಬಾದ್ ಮೂಲದ ಶ್ರವಣ್ (25) ಮೃತ ದುರ್ಧೈವಿ. ಶ್ರವಣ್ ಸ್ನೇಹಿತರೊಂದಿಗೆ ಹೈದರಾಬಾದ್ ನಿಂದ‌ ಕಾಫಿನಾಡಿನ ಪ್ರವಾಸ ಕೈಗೊಂಡಿದ್ದರು. ಸೋಮವಾರ ಬೆಳಿಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್ ಗೆ ತೆರಳಿದ್ದರು. ಹೆಬ್ಬೆ ಫಾಲ್ಸ್ ನಲ್ಲಿ ಅಪಾಯಕಾರಿ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆಯುವ ವೇಳೆಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ‌. ಬಿದ್ದ ರಭಸಕ್ಕೆ ಯುವಕನ ತಲೆಗೆ ಬಂಡೆ ಕಲ್ಲು ಬಡಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More:ನಾನು ಸೋತಿರಬಹುದು ಆದರೆ ಶಿವಮೊಗ್ಗ ಬಿಟ್ಟು ಹೋಗಲ್ಲ ; ಗೀತಾ ಶಿವರಾಜ್‌ಕುಮಾರ್

Leave a Comment