ಕಾಡಾನೆಗಳ ಹಾವಳಿ ; ಲಕ್ಷಾಂತರ ರೂ. ಬೆಳೆ ನಷ್ಟ | ವಿಲ್‌ಚೇರ್ ವಿತರಣೆ

Written by malnadtimes.com

Published on:

RIPPONPETE ; ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳ ಉಪಟಳದಿಂದಾಗಿ ಸರ್ವೇ ನಂ 119 ರಲ್ಲಿನ ದೊರೆಸ್ವಾಮಿ ಎಂಬುವರಿಗೆ ಸೇರಿದ ಅಡಿಕೆ, ಬಾಳೆ ತೋಟ ಧ್ವಂಸಗೊಳಿಸಿದ್ದು ಸಾಕಷ್ಟು ನಷ್ಟ ಉಂಟು ಮಾಡಿವೆ.

WhatsApp Group Join Now
Telegram Group Join Now
Instagram Group Join Now

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/r/18RrpnP25V/

ಕಳೆದ ಒಂದು ವಾರದಿಂದ ಆಲವಳ್ಳಿ ಗ್ರಾಮದ ಕಮದೂರು, ಚನ್ನಕೊಪ್ಪ, ಗಿಳಾಲಗುಂಡಿ, ಲಕ್ಕವಳ್ಳಿ ಹೀಗೆ ಕಾಡಾನೆಗಳ ಹಿಂಡು ಸಂಚರಿಸುತ್ತಾ ರೈತರ ಜಮೀನಿನಲ್ಲಿ ಅಡಿಕೆ, ಬಾಳೆ ಧ್ವೃಸಗೊಳಿಸುವುದರೊಂದಿಗೆ ರಾತ್ರಿ, ಹಗಲು ರೈತರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಜೀವ ಭಯದಲ್ಲಿ ಓಡಾಡಬೇಕಾದ ಅನಿರ್ವಾತೆ ಎದುರಾಗಿದೆ.

ಅರಣ್ಯ ಇಲಾಖೆಯವರು ಕಾಡಾನೆಗಳ ಸ್ಥಳಾಂತರಕ್ಕೆ ಹರಸಾಹಸ ಪಡುತ್ತಿದ್ದು ಆನೆಗಳು ಮಲೆನಾಡಿನ ವ್ಯಾಪ್ತಿಯಲ್ಲಿ ಬೀಡು ಬಿಟ್ಟಂತಾಗಿದೆ.


ವಿಲ್‌ಚೇರ್ ವಿತರಣೆ

RIPPONPETE ; ವಯೋವೃದ್ದ ವಿಕಲಚೇತನರಿಗೆ ಸ್ವಯಂ ಪ್ರೇರಿತರಾಗಿ ಓಡಾಡಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಫಲಾನುಭವಿಗಳಿಗೆ ವಿಲ್‌ಚೇರ್ ನೀಡಲಾಗುತ್ತಿದೆ ಎಂದು ಹೊಸನಗರ ಧರ್ಮಸ್ಥಳ ಯೋಜನಾಧಿಕಾರಿ ಪ್ರದೀಪ್ ಆರ್.ಹೆಗಡೆ ಹೇಳಿದರು.

ಅವರು ರಿಪ್ಪನ್‌ಪೇಟೆಯ ಧರ್ಮಸ್ಥಳ ಸ್ವಸಹಾಯ ಸಂಘದ ಅಶ್ರಯದಲ್ಲಿ ಆಯೋಜಿಸಲಾದ `ಜನಮಂಗಲ’ ಕಾರ್ಯಕ್ರಮದಲ್ಲಿ ವಯೋವೃದ್ದ ವಿಕಲಚೇತನ ಟೈಲರ್ ವಸಂತಣ್ಣ ಮತ್ತು ಪದ್ಮಮ್ಮ ಎಂಬ ಇಬ್ಬರು ಆಕಸ್ಮಿಕವಾಗಿ ಮನೆಯಲ್ಲಿ ಬಿದ್ದು ತಮ್ಮ ಕಾಲಿನ ಸ್ವಾಧೀನತೆ ಕಳೆದುಕೊಂಡ ವೃದ್ದ ಅಂಗವಿಕಲರಿಗೆ ವಿಲ್‌ಚೇರ್ ವಿತರಿಸಿ ಮಾತನಾಡಿ, ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವ ಮೂಲಕ ಇನ್ನೊಬ್ಬರಿಗೂ ಇದರ ಉಪಯೋಗದ ಕುರಿತು ಮಾಹಿತಿ ನೀಡಿದರು. ಅಲ್ಲದೇ ಸಮಾಜದಲ್ಲಿ ಕಷ್ಟಗಳು ಸಹಜ ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ವಿಕಲಚೇತನರು ಇನ್ನೊಬ್ಬರ ಆಶ್ರಯಕ್ಕಾಗಿ ಅವಲಂಬಿಸಿಕೊಳ್ಳುವ ಬದಲು ವಿಲ್‌ಚೇರ್ ಸಹಾಯದಿಂದ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಇದೊಂದು ಉಪಯುಕ್ತ ಸಾಧನವಾಗಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸಂಚಾಲಕಿ ನಾಗರತ್ನ ದೇವರಾಜ್, ಧರ್ಮಸ್ಥಳ ಯೋಜನಾ ತಾಲ್ಲೂಕು ಪ್ರಬಂಧಕ ಪ್ರದೀಪ, ರಿಪ್ಪನ್‌ಪೇಟೆ ವಲಯ ಸಂಚಾಲಕ ನಟರಾಜ್, ಕುಷನ್ ದೇವರಾಜ, ಆರ್.ಎಂ.ನವೀನ್, ನಾಗರಾಜ, ವಿನಾಯಕನಗರ ನಾಗರಾಜ ಇನ್ನಿತರರು ಹಾಜರಿದ್ದರು.

Leave a Comment