ರಿಪ್ಪನ್‌ಪೇಟೆಯಲ್ಲಿ SSLC ಮಕ್ಕಳಿಗೆ 10 ದಿನಗಳ ಸನಿವಾಸ ಕಲಿಕಾ ಶಿಬಿರ | ನಿರಂತರ ಅಭ್ಯಾಸವೇ ಸಾಧನೆಯ ದಾರಿ ; ಬಿಇಒ ಗಣೇಶ್ ವೈ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಜಿಲ್ಲಾ ಪಂಚಾಯತ್ ಶಿವಮೊಗ್ಗ, ಉಪನಿರ್ದೇಶಕರ ಕಚೇರಿ ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹೊಸನಗರ ಹಾಗೂ ಸಮಾಜ ಕಲ್ಯಾಣ ಇಲಾಖೆ ಹೊಸನಗರ ಇವರ ಸಹಯೋಗದಲ್ಲಿ, ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು-ಪ್ರೌಢಶಾಲಾ ವಿಭಾಗ (ಕರ್ನಾಟಕ ಪಬ್ಲಿಕ್ ಸ್ಕೂಲ್)ದಲ್ಲಿ ಎಸ್.ಎಸ್.ಎಲ್.ಸಿ ಕಲಿಕೆಯಲ್ಲಿ ಹಿಂದುಳಿದ 2025–26ನೇ ಸಾಲಿನ 60 ವಿದ್ಯಾರ್ಥಿಗಳಿಗೆ 10 ದಿನಗಳ ಸನಿವಾಸ ಕಲಿಕಾ ಶಿಬಿರವನ್ನು ಆಯೋಜಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿಬಿರವನ್ನು ಹೊಸನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, “ಮಕ್ಕಳು ಶಿಕ್ಷಕರು ಬೋಧಿಸಿದ ಪಾಠಗಳನ್ನು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಕಲಿಕೆಯಲ್ಲಿ ಪ್ರಗತಿ ಸಾಧ್ಯ. ನೈತಿಕ ಮೌಲ್ಯಗಳ ಜೊತೆಗೆ ಕಲಿಕಾ ಖಾತ್ರಿಯ ಸದುಪಯೋಗವಾದರೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಪುನ್ನೋಜಿರಾವ್ ಅವರು ವಹಿಸಿದ್ದರು. ಉಪ ಪ್ರಾಂಶುಪಾಲ ಕೆಸಿನಮನೆ ರತ್ನಾಕರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶೇಷಾಚಲ ಜಿ. ನಾಯ್ಕ್, ಬಿ.ಆರ್.ಸಿ ಸಮನ್ವಯಾಧಿಕಾರಿ ರಂಗನಾಥ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಈಶ್ವರ್, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಹಾಗೂ ಬಿ.ಆರ್.ಸಿ ರಾಜೇಂದ್ರ, ಡಯಟ್ ಉಪನ್ಯಾಸಕ ಉಪನ್ಯಾಸಕ ಹೂವಣ್ಣ, ಇಸಿಓ ಕರಿಬಸಪ್ಪ, ಸಿ ಆರ್ ಪಿ ಗಳಾದ ಮಂಜುನಾಥ, ಮಹೇಶ್, ಸಂತೋಷ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರಾದ ರವಿಕುಮಾರ್, ರಾಮಕೃಷ್ಣ, ರೇಖಾವತಿ, ಕಲಾವತಿ, ಸಂಪನ್ಮೂಲ ಶಿಕ್ಷಕರಾದ ಕಾವ್ಯ, ದೀಪಾ, ಪೂರ್ಣಿಮಾ ಸೇರಿದಂತೆ ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.

ಶಿಬಿರದಲ್ಲಿ ಭಾಗವಹಿಸಿದ 60 ವಿದ್ಯಾರ್ಥಿಗಳು ಉತ್ಸಾಹದಿಂದ ಕಲಿಕಾ ತರಬೇತಿಯಲ್ಲಿ ಪಾಲ್ಗೊಂಡರು. ಈ ಸನಿವಾಸ ಕಲಿಕಾ ಶಿಬಿರವು ಗ್ರಾಮೀಣ ಪ್ರದೇಶದ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದು ಶಿಕ್ಷಣಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Leave a Comment