ಸೊರಬ ತಾಲ್ಲೂಕಿನ ಉದ್ರಿ ವಡ್ಡಿಗೇರಿ ನಿವಾಸಿ ಹನುಮಂತರಪ್ಪ ಅವರ ಪುತ್ರಿ ಶಶಿಕಲಾ (17) ಎಂಬ ಯುವತಿ ಫೆಬ್ರವರಿ 01ರಂದು ಮನೆ ಬಳಿಯ ಗೇಟ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೊರಟು, ಈವರೆಗೂ ಮನೆಗೆ ವಾಪಾಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಶಿಕಲಾಳ ಗುರುತುಚಿಹ್ನೆಗಳು:
- ಎತ್ತರ: ಸುಮಾರು 4.8 ಅಡಿ
- ಮುಖ: ದುಂಡುಮುಖ
- ವರ್ಣ: ಕಪ್ಪು
- ಮೈಕಟ್ಟು: ಸಾಧಾರಣ
- ವಸ್ತ್ರ: ಮನೆಯಿಂದ ಹೊರಡುವಾಗ ಕಪ್ಪು ಬಣ್ಣದ ಚೂಡಿದಾರ್
ಈ ಯುವತಿಯನ್ನು ಯಾರಾದರೂ ಕಂಡುಬಂದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ತಕ್ಷಣ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ:
- ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ : 08182-261400
- ಸಾಗರ ಗ್ರಾಮಾಂತರ ಠಾಣೆ (ASP, ಸಾಗರ ಉಪವಿಭಾಗ): 08183-226082
- ಪಿ.ಐ., ಸಾಗರ ಗ್ರಾಮಾಂತರ ಠಾಣೆ: 9480803361
- ಪಿ.ಎಸ್.ಐ., ಸಾಗರ ಗ್ರಾಮಾಂತರ ಪೊಲೀಸ್ ಠಾಣೆ: 9480803385
ಯಾವುದೇ ಸಣ್ಣ ಮಾಹಿತಿಯೂ ಮಹತ್ವದ್ದಾಗಿರಬಹುದು. ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

