SHIVAMOGGA / CHIKKAMAGALURU | Rain report ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಕ್ಷೀಣಿಸಿದ ಮಳೆ ಮಂಗಳವಾರ ಬೆಳಿಗ್ಗೆಯಿಂದ ಮತ್ತೆ ಬಿರುಸುಗೊಂಡಿದೆ. ಇಂದು ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ :
- ಸೊನಲೆ (ಹೊಸನಗರ) : 98 mm
- ಹುಲಿಕಲ್ (ಹೊಸನಗರ) : 98 mm
- ಬಿದನೂರುನಗರ (ಹೊಸನಗರ) : 92 mm
- ಮಾಸ್ತಿಕಟ್ಟೆ (ಹೊಸನಗರ) : 87 mm
- ಕಂಡಿಕಾ (ಸಾಗರ) : 86.5 mm
- ಚಕ್ರಾನಗರ (ಹೊಸನಗರ) : 76 mm
- ಯಡೂರು ಹೊಸನಗರ) : 71 mm
- ಕಲ್ಮನೆ (ಸಾಗರ) : 70.5 mm
- ಹಾದಿಗಲ್ಲು (ತೀರ್ಥಹಳ್ಳಿ) : 68 mm
- ಸುಳಗೋಡು (ಹೊಸನಗರ) : 67 mm
- ಹೊಸಬಾಳೆ (ಸೊರಬ) : 63 mm
- ಕಾರ್ಗಲ್ (ಸಾಗರ) : 62.4 mm
- ನೊಣಬೂರು (ತೀರ್ಥಹಳ್ಳಿ) : 62 mm
- ಹೊಸೂರು-ಸಂಪೆಕಟ್ಟೆ (ಹೊಸನಗರ) : 61 mm
- ಸಾವೇಹಕ್ಲು (ಹೊಸನಗರ) : 60 mm
- ಮುಟುಗುಪ್ಪೆ (ಸೊರಬ) : 56.5 mm
- ದೇಮ್ಲಾಪುರ (ತೀರ್ಥಹಳ್ಳಿ) : 56 mm
- ಮಾಣಿ (ಹೊಸನಗರ) : 55 mm
- ರಿಪ್ಪನ್‌ಪೇಟೆ (ಹೊಸನಗರ) 20 mm
- ಹೊಸನಗರ (ಹೊಸನಗರ) : 19 m
- ಅರಸಾಳು (ಹೊಸನಗರ) 15 mm
ಚಿಕ್ಕಮಗಳೂರು ಜಿಲ್ಲೆ :
- ಸೀತೂರು (ಎನ್.ಆರ್.ಪುರ) : 66 mm
- ಬೇಗಾರು (ಶೃಂಗೇರಿ) : 57.5 mm
- ಹಂತೂರು (ಮೂಡಿಗೆರೆ) : 50 mm
- ಕಾಮನದುರ್ಗ (ತರೀಕೆರೆ) : 41.5 mm
- ಕೊಪ್ಪ ಗ್ರಾಮೀಣ (ಕೊಪ್ಪ) : 34 mm
- ಬಣಕಲ್ (ಮೂಡಿಗೆರೆ) : 32 mm
- ಬೆಟ್ಟಗೆರೆ (ಮೂಡಿಗೆರೆ) : 30.5 mm
- ಹೊರನಾಡು (ಕಳಸ) : 30 mm
- ಬಿಂತ್ರವಳ್ಳಿ (ಕೊಪ್ಪ) : 29 mm
- ಕೂತಗೋಡು (ಶೃಂಗೇರಿ) : 29 mm
ಲಿಂಗನಮಕ್ಕಿ ಜಲಾಶಯ :
ಗರಿಷ್ಠ 1819 ಅಡಿ ಇರುವ ಲಿಂಗನಮಕ್ಕಿ ಜಲಾಶಯಕ್ಕೆ ಇಂದು ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಒಂದೂವರೆ ಅಡಿಗಳಷ್ಟು ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟ 1799 ಅಡಿ ತಲುಪಿದೆ. ಇದರಿಂದ ಕಳೆದ ವರ್ಷಕ್ಕಿಂತ ಸುಮಾರು 30 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 41269 ಕ್ಯುಸೆಕ್ ನೀರು ಹರಿದು ಬರುತ್ತಿದೆ.