Hombuja

ವ್ಯಕ್ತಿಯ ವ್ಯಕ್ತಿತ್ವವನ್ನು ನಾಗರೀಕ ಸಮಾಜದಲ್ಲಿ ಪರಿಚಯಿಸುವ ಪ್ರತೀಕವೇ ನಾಟಕಗಳು ; ಆರ್.ಎಂ.ಎಂ.

ರಿಪ್ಪನ್‌ಪೇಟೆ ; ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಹಾಸ್ಯದ ಮೂಲಕ ತಿಳಿಸುವುದರೊಂದಿಗೆ ವ್ಯಕ್ತಿಯ ವ್ಯಕ್ತಿತ್ವವನ್ನು ನಾಗರೀಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದೇ ನಾಟಕ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಜಗನ್ಮಾತೆ ಪದ್ಮಾವತಿ ಅಮ್ಮನವರ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಅಯೋಜಿಲಾದ ಕುಂದಾಪುರ ಮೂರು ಮುತ್ತು ತಂಡದವರ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮಲ್ಲಿರುವ ಕಲೆ ಸಾಹಿತ್ಯ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಕಲೆಗಳು ಪ್ರೋತ್ಸಾಹದ ಕೊರತೆಯಿಂದ ಅಳಿಯುವಂತಾಗಿವೆ, ಅದನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಹಾಗೂ ಯುವ ಜನಾಂಗ ದುಶ್ಚಟಗಳಿಗೆ ಹಾಗೂ ಮೊಬೈಲ್ ಗೀಳಿಗೆ ಬಿದ್ದು ತಮ್ಮ ಬದುಕು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದ ವ್ಯಕ್ತಪಡಿಸಿ, ನಾಟಕ ಪ್ರದರ್ಶನದಲ್ಲಿ ಬರುವ ಪಾತ್ರಗಳ ಕಥೆಯಿಂದಲಾದರೂ ನಮ್ಮ ಯುವ ಜನತೆ ಪರಿವರ್ತನೆ ಹೊಂದಿ ದುಶ್ಚಟದಿಂದ ದೂರಸರಿಯಲು ಇದೊಂದು ಉತ್ತಮ ಸಾಧನವಾಗಿದೆ ಎಂದರು.

ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ರಾಮಚಂದ್ರ ಬಂಡಿ, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯಿತ್ ಮಾಜಿ ಸದಸ್ಯೆ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್, ನಮ್ಮೂರ ಬಹುಮುಖ ಪ್ರತಿಭೆ ಸಂತೋಷ, ಮುಖಂಡರಾದ ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಬಾಬು ಪುಂಡಲೀಕ, ರಾಘವೇಂದ್ರ, ಶ್ರೀಕಾಂತ, ಗುರು ಸುಣ್ಣಕಲ್ಲು, ರಾಘು ತೋಟದಕಟ್ಟೆ, ಸಚಿನ್‌ಗೌಡ, ನಟೇಶ, ಕಿರಣ್, ಇನ್ನಿತರ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ನಂತರ ಕುಂದಾಪುರ ಮೂರು ಮುತ್ತು ತಂಡದವರ ನಾಟಕ ಪ್ರದರ್ಶನಕ್ಕೆ ಕಲಾರಸಿಕರನ್ನು ಹಾಸ್ಯಲೋಕಕ್ಕೆ ಕರೆದೊಯ್ಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!