Hombuja

ಸಾಮರಸ್ಯದ ಬದುಕಿಗೆ ಕ್ಷಮಾವಳಿ ಪರ್ವವೇ ದಾರಿದೀಪ ; ಹೊಂಬುಜ ಶ್ರೀ

ಮನುಷ್ಯ ಸಹಜವಾದ ಕೋಪ, ಅಸೂಯೆ ಹಾಗೂ ದ್ವೇಷಗಳನ್ನು ಬದಿಗಿಟ್ಟು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯದಿಂದ ಬದುಕುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕೆಂದು ಹೊಂಬುಜ ಶ್ರೀ ಹೇಳಿದರು.

ಸಾಮರಸ್ಯದ ಬದುಕಿಗೆ ಕ್ಷಮಾವಳಿ ಪರ್ವವೇ ದಾರಿದೀಪ Hombuja

ಹೊಸನಗರ : ಮನುಷ್ಯ ಸಹಜವಾದ ಕೋಪ, ಅಸೂಯೆ ಹಾಗೂ ದ್ವೇಷಗಳನ್ನು ಬದಿಗಿಟ್ಟು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯದಿಂದ ಬದುಕುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ನುಡಿದರು.

WhatsApp Group Join Now
Telegram Group Join Now
Instagram Group Join Now

ಶ್ರೀಕ್ಷೇತ್ರದಲ್ಲಿ ‘ಪರ್ಯೂಷಣ ಪರ್ವ’ದ ಸಮಾಪನದ ಅಂಗವಾಗಿ ಆಯೋಜಿಸಲಾಗಿದ್ದ ಪವಿತ್ರ ‘ಕ್ಷಮಾವಳಿ’ ದಿನದಂದು ಅವರು ಮಂಗಲ ಪ್ರವಚನ ನೀಡಿ, “ಜೈನ ಧರ್ಮದ ಮೂಲ ಮಂತ್ರವೇ ‘ಅಹಿಂಸಾ ಪರಮೋ ಧರ್ಮಃ’. ಆದ್ದರಿಂದ ನಾವು ಯಾವುದೇ ಜೀವಿಗೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಬಾರದು. ಸಂಘರ್ಷಗಳನ್ನು ಮರೆತು ಸಕಲ ಜೀವರಾಶಿಗಳಲ್ಲೂ ಮೈತ್ರಿಭಾವ ಬೆಳೆಸಿಕೊಂಡು, ಸಹಬಾಳ್ವೆಯ ಸಂಕಲ್ಪ ತೊಡುವುದೇ ಶ್ರೇಷ್ಠ ಧರ್ಮಮಾರ್ಗ” ಎಂದು ಶ್ರೀಗಳು ಕರೆ ನೀಡಿದರು.

ಇದೇ ವೇಳೆ ಶ್ರೀಕ್ಷೇತ್ರದಲ್ಲಿ ಅನಂತನೋಂಪಿ ಉದ್ಯಾಪನೆಯ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು. ಪೂಜ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಾನದಲ್ಲಿ ವಿಶೇಷ ಷೋಡಶೋಪಚಾರ ಪೂಜೆಗಳು ಜರುಗಿದವು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳು ಕ್ಷೇತ್ರದ ಎಲ್ಲಾ ಜಿನಮಂದಿರಗಳ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪೂಜಾ ಕೈಂಕರ್ಯಗಳ ಬಳಿಕ ಶ್ರೀಗಳು ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಲದ ಶ್ರಾವಿಕೆಯರು ಹಾಗೂ ಸ್ಥಳೀಯ ಮತ್ತು ಪರವೂರಿನಿಂದ ಆಗಮಿಸಿದ್ದ ಅಪಾರ ಭಕ್ತವೃಂದದವರು ಪರಸ್ಪರ ‘ಮಿಚ್ಛಾಮಿ ದುಕ್ಕಡಂ’ ಎನ್ನುವ ಮೂಲಕ ಕ್ಷಮೆ ಕೋರಿ ಸೌಹಾರ್ದತೆ ಮೆರೆದರು. ಭವ್ಯ ಪಲ್ಲಕ್ಕಿ ಉತ್ಸವದೊಂದಿಗೆ ಈ ಧಾರ್ಮಿಕ ಸಮಾರಂಭವು ಸಂಪನ್ನಗೊಂಡಿತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!