Hombuja

ಅ.11ರಿಂದ ಹೊಂಬುಜದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಸಂಭ್ರಮ

ಹೊಂಬುಜ ಶ್ರೀ ಪದ್ಮಾವತಿ ದೇವಿಯ ಸನ್ನಿಧಾನದಲ್ಲಿ ಈ ಬಾರಿಯ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ.

ಹೊಂಬುಜದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಸಂಭ್ರಮ Dasara

ಹೊಸನಗರ : ಇತಿಹಾಸ ಪ್ರಸಿದ್ಧ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಇಷ್ಟಾರ್ಥಗಳನ್ನು ಕರುಣಿಸುವ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಾನದಲ್ಲಿ ಈ ಬಾರಿಯ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಜೈನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಪರಂಪರಾಗತವಾಗಿ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಸುಮಾರು 1400 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಹೊಂಬುಜ ಕ್ಷೇತ್ರವು ಅದ್ಭುತ ಶಿಲ್ಪಕಲೆಗಳು ಹಾಗೂ ಅಪರೂಪದ ತಾಳೆಗರಿಯ ಹಸ್ತಪ್ರತಿಗಳ ಆಗರವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಜಿನಾಲಯಗಳಲ್ಲಿ ಜೈನ ಆಗಮ ಶಾಸ್ತ್ರೋಕ್ತವಾಗಿ ಫಲ, ಪುಷ್ಪ, ಧಾನ್ಯ ಹಾಗೂ ಶರ್ಕರ ನೈವೇದ್ಯಗಳೊಂದಿಗೆ ವಿಶೇಷ ಪೂಜಾ ವಿಧಿ-ವಿಧಾನಗಳು ಜರುಗಲಿವೆ. ಸ್ಥಳೀಯ ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತಾದಿಗಳಿಗೆ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಸುಸಜ್ಜಿತ ಹಾಗೂ ಸ್ವಚ್ಛ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮಗಳ ವಿವರ:

  • ಅಕ್ಟೋಬರ್ 11: ಘಟಸ್ಥಾಪನೆ
  • ಅಕ್ಟೋಬರ್ 17: ಶ್ರೀ ಸರಸ್ವತಿ ಪೂಜೆ
  • ಅಕ್ಟೋಬರ್ 18: ಜೀವದಯಾಷ್ಟಮಿ
  • ಅಕ್ಟೋಬರ್ 19: ಆಯುಧ ಪೂಜೆ ಮತ್ತು ಮಹಾನವಮಿ
  • ಅಕ್ಟೋಬರ್ 20: ವಿಜಯದಶಮಿ ಹಾಗೂ ಶ್ರೀ ಮಹಾದೇವಿ ಪಲ್ಲಕ್ಕಿ ಉತ್ಸವ.

ವಿಜಯದಶಮಿಯ ದಿನದಂದು ಪರಮಪೂಜ್ಯ ಶ್ರೀಗಳವರ ಸಾಂಪ್ರದಾಯಿಕ ಸಿಂಹಾಸನಾರೋಹಣ, ಪಾದಪೂಜೆ ಹಾಗೂ ವಿಶೇಷ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಅಂದು ಸಂಜೆ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ನೆರವೇರಿದ ಬಳಿಕ, ಶ್ರೀಗಳು ಭಕ್ತರಿಗೆ ಬನ್ನಿ ಹಾಗೂ ಮಂತ್ರಾಕ್ಷತೆ ವಿತರಿಸಿ ಆಶೀರ್ವದಿಸಲಿದ್ದಾರೆ.

ಇದರ ಜೊತೆಗೆ, ಹೊಂಬುಜ ಮಠದ ಅಧೀನಕ್ಕೆ ಒಳಪಡುವ ಶ್ರೀಕ್ಷೇತ್ರ ವರಂಗ ಮತ್ತು ಹಟ್ಟಿಯಂಗಡಿಯಲ್ಲೂ ಸಾಂಪ್ರದಾಯಿಕವಾಗಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವಗಳು ಶ್ರದ್ಧಾಭಕ್ತಿಗಳಿಂದ ಜರುಗಲಿವೆ ಎಂದು ಹೊಂಬುಜ ಜೈನ ಮಠದ ಪ್ರಕಟಣೆ ಮಾಹಿತಿ ನೀಡಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!