ರಿಪ್ಪನ್ಪೇಟೆ ; ಇಲ್ಲಿನ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.
ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ ಮೆಕ್ಕಾ ಮಸೀದಿ ಮತ್ತು ಮದೀನಾ ಮಸೀದಿಯ ಗಾಳಿಬೈಲು ಮಸೀದಿಯ ಧರ್ಮಗುರುಗಳು ನೇತೃತ್ವದಲ್ಲಿ ಮುಸ್ಲಿಂ ಭಾಂದವರು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಅಪ್ಪಿ ಶುಭಾಶಯ ಕೋರಿದರು.
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವ ಸಹಬಾಳ್ವೆ ನಡೆಸಬೇಕು. ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ಇಸ್ಲಾಂ ಖಂಡಿಸುತ್ತದೆಂದರು.
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಬ್ಯಾರಿ, ಕಾರ್ಯದರ್ಶಿ ಶೇಖಬ್, ಮುಖಂಡರಾದ ಆರ್.ಎ.ಚಾಬುಸಾಬ್, ಅಮ್ಮೀರ್ಹಂಜಾ, ಅಶೀಫ್ಭಾಷಾ, ರಫಿ, ಮುಸ್ತಾಫ್ಪಾಜಿಲ್, ರೆಹಮಾನ್, ನದೀಮ್, ರಹೀಮ್ಚಾಲಿ, ಪೈಜಲ್, ಅಫ್ಜಲ್ ಬ್ಯಾರಿ, ಗಾಳಿಬೈಲು ಗ್ರಾಮದಲ್ಲಿ ಮಹಮದ್ಷರೀಫ್ ಜಾವಿದ್ಸಾಬ್, ಘನಿಸಾಬ್, ವಜೀರ್ಸಾಬ್, ಉಬೇದುಲ್ಲಾ ಷರೀಫ್, ಸೈಪುಲ್ಲಾ, ಹಿದಾಯಿತ್, ಶಬ್ಬೀರ್ಸಾಬ್, ಖಲೀಲ್ ಷರೀಫ್, ಇನ್ನಿತರ ಮುಸ್ಲಿಂ ಸಮಾಜ ಭಾಂಧವರು ಪಾಲ್ಗೊಂಡಿದ್ದರು.
ಬಕ್ರೀದ್ ಹಿನ್ನಲೆಯಲ್ಲಿ ರಿಪ್ಪನ್ಪೇಟೆ, ಅಮೃತ, ಎಣ್ಣೆನೊಡ್ಲು, ಕೆಂಚನಾಲ, ಗಾಳಿಬೈಲು, ಕೋಡೂರು, ಸುಣ್ಣದಬಸ್ತಿ ಗ್ರಾಮದ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.
 
			




