ಸೊರಬ

ಬಟ್ಟೆಯಲ್ಲಿದ್ದ ಯಮ, ಹೋಗೆ ಬಿಡ್ತು ಗಂಡ-ಹೆಂಡತಿ ಪ್ರಾಣ 

ಸೊರಬ ತಾಲೂಕಿನ ಕಪ್ಪಗಳೆ ಗ್ರಾಮದಲ್ಲಿ ವಿದ್ಯುತ್ ಶಾಕ್‌ನಿಂದ ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ (55) ಮತ್ತು ಅವರ ಪತ್ನಿ ವಿನೋದ (42) ಅವರು ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ ಎನ್ನಲಾಗಿದೆ.

ಮನೆಯ ಮುಂದೆ ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ, ಮನೆಯ ವಿದ್ಯುತ್ ಮೋಟಾರ್‌ನ ಸ್ಕಿನ್ ಆಗಿರುವ ವೈಯರ್‌ ಸ್ಪರ್ಶ ವಾಗಿದೆ, ಅದನ್ನು ಕಾಣದೆ ವಿನೋದ ಅವರು ಬಟ್ಟೆ ಒಣಗಿಸಲು ತಂತಿಗೆ ಕೈಹಾಕಿದಾಗ ವಿದ್ಯುತ್ ಶಾಕ್ ಹೊಡೆದಿದ್ದು, ಅವರು ಸ್ಥಳದಲ್ಲೇ ಬಿದ್ದಿದ್ದಾರೆ. ಪತ್ನಿಯನ್ನು ರಕ್ಷಿಸಲು ಧಾವಿಸಿದ ಕೃಷ್ಣಪ್ಪಗೂ ಶಾಕ್ ಹೊಡೆದು ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳೀಯರ ಆಕ್ರೋಶ, ಅಧಿಕಾರಿಗಳ ನಿರ್ಲಕ್ಷ್ಯ?

ಈ ಘಟನೆ ರಾತ್ರಿ ಸುಮಾರು 9 ಗಂಟೆಗೆ ಸಂಭವಿಸಿದ್ದು, ಸ್ಥಳೀಯರು ಘಟನೆಯ ಮಾಹಿತಿ ತಕ್ಷಣವೇ ನೀಡಿದರೂ ಸಹ, ಕರೆಂಟ್ ತೆಗೆದಿಲ್ಲ ಎಂದು ಸ್ಥಳೀಯ ವಿದ್ಯುತ್ ಇಲಾಖೆ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

ಮೃತದೇಹಗಳನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗೆ ರವಾನಿಸಲಾಗಿದ್ದು, ಸೊರಬ ಪಿಎಸ್‌ಐ ನವೀನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೋಕದಲ್ಲಿ ಮುಳುಗಿದ ಗ್ರಾಮ

ಈ ದುರ್ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದು, ಸರಕಾರದಿಂದ ತಕ್ಷಣ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಶೋಕದ ವಾತಾವರಣವಿದೆ.

Read More:ರೈತರೆ ಗಮನಿಸಿ! ಈ ಯೋಜನೆಯಡಿ ಮಿನಿ ಟ್ರ್ಯಾಕ್ಟರ್‌ಗೆ ಶೇ.90ರಷ್ಟು ಸಬ್ಸಿಡಿ ಪಡೆಯಬಹುದು!

Leave a Comment