ಶಿವಮೊಗ್ಗ : ತಾಲೂಕಿನ ಕುಂಸಿ ಸಮೀಪದ ಚಿಕ್ಕಮರಸ ಗ್ರಾಮದಲ್ಲಿ ಜೂನ್ 29ರ ರಾತ್ರಿ 9 ರಿಂದ 10 ಗಂಟೆಯ ಮಧ್ಯೆ ಭೀಕರ ಕೊ**ಲೆ ನಡೆದಿದೆ. ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ನಿರ್ದಯವಾಗಿ ಕೊ**ಲೆ ಹಾಕಲಾಗಿದೆ.
ಕೊ*ಲೆಗೀಡಾದ ವ್ಯಕ್ತಿಯನ್ನು ವಸಂತ್ (34) ಎಂದು ಗುರುತಿಸಲಾಗಿದೆ. ಕುಂಸಿ ಗ್ರಾಮದ ನಿವಾಸಿಯಾಗಿದ್ದು, ಕೂಲಿ ಕೆಲಸಮಾಡುತ್ತಾ ಜೀವನ ಸಾಗಿಸುತ್ತಿದ್ದರು. ವಿವಾಹಿತನಾಗಿದ್ದ ವಸಂತ್ ಭೀಕರವಾಗಿ ಕೊ*ಲೆಗೀಡಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಘಟನೆ ನಡೆದ ನಂತರ ಕೂಡಲೇ ಇನ್ಸ್‌ಪೆಕ್ಟರ್ ದೀಪಕ್ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸಂತನ ಕೊ**ಲೆಗೆ ನಿಖರವಾದ ಕಾರಣಗಳು ಇನ್ನೂ ಬಹಿರಂಗವಾಗಿಲ್ಲ. ಆದರೂ, ಸ್ಥಳೀಯ ಮೂಲಗಳಿಂದ ದೊರಕಿದ ಮಾಹಿತಿಯ ಪ್ರಕಾರ, ಕುಂಸಿ ಗ್ರಾಮದ ಇಬ್ಬರು ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗವಹಿಸಿದ್ದಾಗಿ ಶಂಕಿಸಲಾಗಿದೆ.
ಕೃತ್ಯ ನಡೆದಿದೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಸಕ್ರೀಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Read more :ರಿಪ್ಪನ್‌ಪೇಟೆ ; ಕರ್ನಾಟಕ ಕಾರ್ಮಿಕ ಪರಿಷತ್ ವತಿಯಿಂದ ನೂತನ ಪಿಎಸ್ಐಗೆ ಸನ್ಮಾನ