ನ್ಯಾಯಾಲಯದ ಆದೇಶ ಉಲ್ಲಂಘಿಸಿ ರಸ್ತೆ ಜಾಗ ಒತ್ತುವರಿ ; ಠಾಣೆಗೆ ದೂರು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಗ್ರಾಮ ಠಾಣಾ ಜಾಗದಲ್ಲಿ ಜಮೀನಿಗೆ ಓಡಾಡುವ 30 ಅಡಿ ಅಗಲದ ರಸ್ತೆಯನ್ನು ಒತ್ತುವರಿ ಹೆಸರಿನಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಜಾಗದಲ್ಲಿ ಬಲತ್ಕಾರದಿಂದ ಅಡಿಕೆ ಗಿಡ ನೆಟ್ಟಿರುವ ಬಗ್ಗೆ ಠಾಣೆಗೆ ಈ ಸಂಪರ್ಕ ರಸ್ತೆಯ ಜಮೀನುದಾರರು ದೂರು ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಕೆಲದಿನಗಳಿಂದ ತಮ್ಮಡಿಕೊಪ್ಪ ಗ್ರಾಮದ ಟಿ.ಹೆಚ್.ಮಂಜುನಾಥ ಮತ್ತು ಟಿ.ಹೆಚ್.ರಾಜು ಇವರ ಜಮೀನು ಸರ್ವೇ ನಂ 16/2 ಮತ್ತು 16/3 ಹಾಗೂ 16/4 ಸೇರಿದಂತೆ 16/9 ಜಮೀನಿಗೆ ಸಂಪರ್ಕ ಕಲ್ಪಿಸುವ 30 ಅಡಿ ಅಗಲದ ಗ್ರಾಮ ಪಂಚಾಯ್ತಿ ರಸ್ತೆಯನ್ನು ಟಿ.ಆರ್. ಯಲೋಜಿರಾವ್, ಟಿ.ವೈ.ಮನೋಜ್ (ಮನೋಹರ), ಟಿ.ವೈ. ರಾಮೋಜಿ, ಟಿ.ಆರ್.ಗೋವಿಂದಪ್ಪ ಇನ್ನಿತರು ಸೇರಿದಂತೆ ಇನ್ನಿತರರ ಜಮೀನಿಗೆ ಹಾದು ಹೋಗುವ ಸಂಪರ್ಕ ರಸ್ತೆಯನ್ನು ತಮ್ಮಡಿಕೊಪ್ಪ ಗ್ರಾಮದ ಟಿ.ಆರ್. ಯಲೋಜಿರಾವ್, ಟಿ.ವೈ.ಮನೋಜ್ (ಮನೋಹರ) ಟಿ.ವೈ.ರಾಮೋಜಿ, ಟಿ.ಆರ್. ಗೋವಿಂದಪ್ಪ ಇನ್ನಿತರು ಒತ್ತುವರಿ ಮಾಡುತ್ತಿದ್ದಾರೆಂದು ಆರೋಪಿಸಿ ಹೊಸನಗರ ನ್ಯಾಯಾಲಯದಲ್ಲಿ ಇನ್ ಜಂಕ್ಷನ್ (ಪ್ರತಿಬಂಧಕಾಜ್ಞೆ) ಆದೇಶವಿದ್ದರು ಈ ಆದೇಶವನ್ನು ಉಲ್ಲಂಘಿಸಿ ಬಲತ್ಕಾರವಾಗಿ 30 ಅಡಿ ಅಗಲದ ಸಂಪರ್ಕ ರಸ್ತೆಯನ್ನು ಬಂದ್ ಮಾಡಿ ತಡೆಮಾಡಿರುತ್ತಾರೆ.

ಈ ಹಿಂದೆ ಮಾಧ್ಯಮದಲ್ಲಿ ಸುದ್ದಿಯಾಗಿದ್ದು ತಮ್ಮಡಿಕೊಪ್ಪ ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ಕಬಳಿಸುವ ಹುನ್ನಾರ ನಡೆಸಲಾಗಿದೆ ಎಂದು ಟಿ.ಹೆಚ್.ಮಂಜುನಾಥ ಮತ್ತು ಟಿ.ಹೆಚ್.ರಾಜು ಇನ್ನಿತರರು ನ್ಯಾಯಾಲಯದ ಮೆಟ್ಟಿಲು ಏರುವ ಮೂಲಕ ಇನ್ ಜಂಕ್ಷನ್‌ ಆದೇಶವನ್ನು ತಂದಿದ್ದಾರೆ.

Leave a Comment