Ripponpete

ರಿಪ್ಪನ್‌ಪೇಟೆ ; ಪೊಲೀಸ್‌ ಠಾಣೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ

ರಿಪ್ಪನ್‌ಪೇಟೆ ; ಪೆನ್ನು, ಪೇಣಿ, ಪುಸ್ತಕ ಹಿಡಿಯುವ ಎಳೆಯ ಕೈ, ಮನಸ್ಸಿಗೆ ಪೊಲೀಸ್ ಇಲಾಖೆಯ ಕಾನೂನಿನ ಪಾಠವನ್ನು ಠಾಣೆಯ ಪಿಎಸ್‌ಐ ರಾಜುರೆಡ್ಡಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನಿನ ಕುರಿತು ಅರಿವು ಮೂಡಿಸಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಪೊಲೀಸ್ ಠಾಣೆಯಲ್ಲಿ ಇಂದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಳವು ಪ್ರಕರಣ ಮತ್ತು ಲೈಗಿಂಕ ದೌರ್ಜನ್ಯದ ಹಾಗೂ ಪೋಕ್ಸೋ ಪ್ರಕರಣ, ಹೊಡೆದಾಟದ ಪಿಕ್ ಪ್ಯಾಕೆಟ್ ಪ್ರಕರಣ ಮಕ್ಕಳ ಅಪಹರಣ ಕುರಿತು ವಿದ್ಯಾರ್ಥಿಗಳು ಜಾಗೃತರಾಗಿ ಅದನ್ನು ಸಮರ್ಥವಾಗಿ ಎದುರಿಸುವುದರ ಕುರಿತು ಕಾನೂನಿನಡಿಯಲ್ಲಿ ಏನು? ಹೇಗೆ? ನಿಯಮಗಳನ್ನು ಅಳವಡಿಸಲಾಗಿದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಕೇಳಿ ಬರುತ್ತಿದ್ದು ಯಾರೇ ಪರಿಚಯವಿಲ್ಲದ ವ್ಯಕ್ತಿಗಳಿಂದ ತಿಂಡಿ ತಿನ್ನಿಸುಗಳನ್ನು ಚಾಕೊಲೇಟ್‌ಗಳನ್ನು ತೆಗೆದುಕೊಳ್ಳಬಾರದು ಅದರಲ್ಲಿ ಮತ್ತು ಬರುಸಿರುವ ವಸ್ತುಗಳನ್ನು ಹಾಕಿ ನಿಮ್ಮಗಳನ್ನು ಅಪಹರಣ ಮಾಡುತ್ತಾರೆ. ಈ ಬಗ್ಗೆ ತಾವೂಗಳು ಓರ್ವರಾಗಿ ಓಡಾಡದೆ ಗುಂಪುಗುಂಪಾಗಿ ಹೋಗಿ ಬರಬೇಕು ಹಾಗೂ ಸಂಚಾರಿ ನಿಯಮದನ್ವಯ ರಸ್ತೆಯಂಚಿನ ಇಕ್ಕಡೆಯಲ್ಲಿ ಪಾದಚಾರಿ (ಫುಟ್‌ಪಾತ್) ನ ಮೇಲೆ ಓಡಾಡುವುದರಿಂದ ಅಪಘಾತದಂತಹ ಅಪಾಯದಿಂದ ದೂರವಿರಲು ಸಾಧ್ಯ. ಉಪಾಯದಿಂದ ಕೆಲವು ಸಮಸ್ಯೆಗಳನ್ನು ಎದುರಿಸಿ ಪರಿಹರಿಸುವಂತಾಗಬೇಕು. ಎಷ್ಟೇ ಕ್ಲಿಷ್ಟಕರ ಸಮಸ್ಯೆಗಳು ಎದುರಾದರು ಉಪಾಯದಿಂದ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ ಎಂದ ಹೇಳಿ ಶಾಲಾ ಅವರಣದೊಳಗೆ ಅಪರಿಚರು ಹೊಸಬರು ಕಾಣಿಸಿಕೊಂಡರೆ ತಕ್ಷಣ ಠಾಣೆಗೆ ಅಥವಾ ತಮ್ಮ ಶಾಲಾ ಮುಖ್ಯಸ್ಥರ ಗಮನಕ್ಕೆ ತರುವಂತೆ ಸಲಹೆ ನೀಡಿ, ಕೈಕೋಳ (ಬೇಡಿ) ಹಾಕುವಾಗ ಬಳಸಲಾಗುವ ಲಾಕ್ ಸಿಸ್ಟಂ ಮತ್ತು ಬಂದೂಕು ಮದ್ದು ಗುಂಡಗಳ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿ ಸಮೂಹಕ್ಕೆ ತಿಳಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿ ಸಮೂಹ ಹಾಗೂ ಶಾಲಾ ಶಿಕ್ಷಕರು ಮತ್ತು ಪೊಲೀಸ್ ಸಿಬ್ಬಂದಿವರ್ಗ ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!