ಕೋಡೂರು ಕೆನರಾ ಬ್ಯಾಂಕ್ ಎದುರು ಅರೆಬೆತ್ತಲಾಗಿ ಪ್ರತಿಭಟಿಸಿದ ಪಿಗ್ಮಿ ಸಂಗ್ರಹಕಾರ

Written by Mahesh Hindlemane

Updated on:

ರಿಪ್ಪನ್‌ಪೇಟೆ ; ಕಳೆದ ಮೂರು ದಶಕಕ್ಕೂ ಅಧಿಕ ಕಾಲ ಇಲ್ಲಿನ ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ನಲ್ಲಿ ನಿತ್ಯ ಪಿಗ್ಮಿ ಸಂಗ್ರಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್. ಮೂರ್ತಿರಾವ್ ಎಂಬುವರು ಬ್ಯಾಂಕ್ ಅಧಿಕಾರಿ ವರ್ಗ ನನಗೆ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿ ಅರೆ ಬೆತ್ತಲೆಯಾಗಿ ಬ್ಯಾಂಕ್ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಿಗ್ಮಿ ಸಂಗ್ರಹಕಾರನ ಸಮಸ್ಯೆಗೆ ಬ್ಯಾಂಕ್ ಅಧಿಕಾರಿ ವರ್ಗ ಸ್ಪಂದಿಸದೇ ಕಳೆದ ಎರಡ್ಮೂರು ತಿಂಗಳಿಂದ ನಿತ್ಯ ಪಿಗ್ಮಿ ಹಣವನ್ನು ಸಂಗ್ರಹಣೆಗೆ ತಾಂತ್ರಿಕ ಕಾರಣ ನೀಡಿ ಅಡ್ಡಿಪಡಿಸಿದ ಬ್ಯಾಂಕ್ ಅಧಿಕಾರಿಗಳ ವರ್ತನೆ ಖಂಡಿಸಿ ಅರೆ ಬೆತ್ತಲೆ ಪ್ರತಿಭಟನೆ ನಡೆಸುತ್ತಿರುವುದಾಗಿ ಮಾಧ್ಯಮಗಳಿಗೆ ವಿವರಿಸಿ, ಬ್ಯಾಂಕ್ ನಿತ್ಯ ನಿಧಿ ಠೇವಣಿ ಸಂಗ್ರಹಣೆಯಿಂದ ಬರುವ ಕಮಿಷನ್‌ನಿಂದ ಜೀವನ ನಡೆಸುವ ನಾವು ಕಳೆದ ಮೂರು ತಿಂಗಳಿಂದ ತಾಂತ್ರಿಕ ಅಡಚಣೆಯ ಕಾರಣವೊಡ್ಡಿ ನಮಗೆ ಠೇವಣಿ ಸಂಗ್ರಹಣೆಯಿಲ್ಲದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಮೂರ್ತಿರಾವ್ ತಮ್ಮ ಮನದಾಳದ ನೋವನ್ನು ಹಂಚಿಕೊಂಡರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1M6985m4pv/

ಬ್ಯಾಂಕ್ ನೌಕರರಿಗೆ ಕೆಲಸ ಮಾಡಲಿ ಬಿಡಲಿ ವೇತನ ಬರುತ್ತದೆ. ಆದರೆ ನಮಗೆ ಕೆಲಸ ಮಾಡಿದರೆ ಮಾತ್ರ ಕಮಿಷನ್ ಬರುತ್ತದೆ. ಈಗ ಮೂರು ತಿಂಗಳಿಂದಲೂ ನಮ್ಮ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿರುವ ಬ್ಯಾಂಕ್ ಅಧಿಕಾರಿ ವರ್ಗದವರ ಕಾರ್ಯವೈಖರಿಯನ್ನು ಕಂಡು ಬೇಸತ್ತು ಶುಕ್ರವಾರ ಬ್ಯಾಂಕ್ ಮುಂಭಾಗ ಅರೆಬೆತ್ತಲಾಗಿ ಪ್ರತಿಭಟನೆ ನಡೆಸುವ ಮೂಲಕ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಹೇಳುವವರೆಗೂ ನಾನು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಈಗಾಗಲೇ ನನ್ನ ಈ ಪ್ರತಿಭಟನೆಗೆ ರಿಪ್ಪನ್‌ಪೇಟೆ, ಹೊಸನಗರದ ಠೇವಣಿದಾರರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಹೇಳಿದರು.

Leave a Comment