Hosanagara | ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ (Schools) ತರಗತಿಗಳು ಇಂದಿನಿಂದ ಆರಂಭವಾಗಿದ್ದು, ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು (Students) ಶಿಕ್ಷಕರು (Teacher’s) ಹೂ ನೀಡಿ ಸ್ವಾಗತಿಸುವ ಮೂಲಕ ಮಕ್ಕಳಲ್ಲಿ ಸಂತಸ ಮೂಡಿಸಿದರು.
ಇನ್ನೂ ಶಾಲೆಗೆ ತಳಿರು ತೋರಣ, ಬಲೂನುಗಳಿಂದ ಶೃಂಗರಿಸಿ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿಕೊಳ್ಳುತ್ತಿರುವುದು ಇಂದು ತಾಲೂಕಿನೆಲ್ಲೆಡೆ ಕಂಡು ಬಂದಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಬೇಸಿಗೆ ರಜೆಯನ್ನು ಮುಗಿಸಿ ಶಾಲೆ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮುಂದಿನ ತರಗತಿಯ ಕೊಠಡಿಯಲ್ಲಿ ತಮ್ಮ ಆಸನವನ್ನು ಅಲಂಕರಿಸಿ ತಮ್ಮ ರಜಾ ದಿನದಲ್ಲಿ ಮದುವೆಮನೆ, ಅಜ್ಜ-ಅಜ್ಜಿ, ಸಂಬಂಧಿಕರ ಮನೆಗಳಲ್ಲಿಗೆ ಹೋಗಿ ಕಳೆದ ದಿನಗಳನ್ನು ಮೇಲಕು ಹಾಕುತ್ತಿದುದ್ದು ವಿಶೇಷವಾಗಿತ್ತು.
ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಸಹ ಶಿಕ್ಷಕಿಯರಾದ ಅನಿತಾ, ಕು.ಕಾವ್ಯ ಇನ್ನಿತರರು ಹಾಜರಿದ್ದರು.
ಇನ್ನೂ ಶಾಲೆಗಳಲ್ಲಿ ಸಿಹಿ ಹಾಗೂ ಪಾಯಸಗಳನ್ನು ಮಕ್ಕಳಿಗೆ, ಪೋಷಕರಿಗೆ, ಶಾಲಾ ಅಭಿವೃದ್ಧಿ ಸಮಿತಿಯವರಿಗೆ ಶಿಕ್ಷಕ ವೃಂದದವರು ವಿತರಿಸಿ ಸಂಭ್ರಮಿಸಿದರು.
ಆರಂಭದ ದಿನ ಮಕ್ಕಳಿಗೆ ಶಿಕ್ಷಕರು ಪಾಠ ಪ್ರವಚನ ಮಾಡದೇ ಸಂತೋಷದಿಂದ ಕಾಲಕಳೆಯುವಂತೆ ಬಿಟ್ಟಿರುವುದು ಇನ್ನೊಂದು ಸಂತಸದ ಸಂಗತಿಯಾಗಿತು.
ಒಟ್ಟಾರೆಯಾಗಿ ಇನ್ನೂ 15 ದಿನ ರಜೆ ಇದ್ದಿದ್ದರೆ ಇನ್ನೂ ಕುಣಿದು ಕುಪ್ಪಳಿಸುತ್ತಿದ್ದವು ಎಂದು ಹಲವು ವಿದ್ಯಾರ್ಥಿಗಳು ತಮ್ಮ ರಜಾ ದಿನದ ಅನುಭವವನ್ನು ಮಾಧ್ಯಮದವರ ಬಳಿ ಹಂಚಿಕೊಂಡರು.
ಹೊಸನಗರ ತಾಲೂಕಿನ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
Read More
ಬಿಜೆಪಿ ಸಂಘಟನಾ ಶಕ್ತಿಯಿಂದ ದೇಶ ಅಭಿವೃದ್ಧಿ ಪಥದಲ್ಲಿ ; ಡಾ.ಧನಂಜಯ ಸರ್ಜಿ