ರಿಪ್ಪನ್‌ಪೇಟೆಯಲ್ಲಿ ಸಂಭ್ರಮ ಸಡಗರದೊಂದಿಗೆ ಈದ್ ಮಿಲಾದ್ ಆಚರಣೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದ ಮೆರವಣಿಗೆಯೊಂದಿಗೆ ಆಚರಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ರಸ್ತೆಯಲ್ಲಿರುವ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯಿಂದ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ವಿನಾಯಕ ವೃತ್ತದ ಮೂಲಕ ಮುಸ್ಲಿಂ ಯುವಕರು ಧಪ್ ಭಾರಿಸುವ ಮೂಲಕ ಮೆರವಣಿಗೆ ನಡೆಸಿದರು.

ಮುಸ್ಲಿಂ ಯುವಕರ “ಧಪ್’’ (ತಮಟೆ)ಮುಸ್ಲಿಂ ಭಜನೆ ಮೆರವಣಿಗೆಯಲ್ಲಿ ಜನಾರ್ಕಷಣೆಗೊಂಡಿತು.

ಮೆರವಣಿಗೆ ತೆರಳುವಾಗ ಗ್ರಾಮ ಪಂಚಾಯಿತ್ ಸದಸ್ಯ ನಿರೂಪ್ ಕುಮಾರ್, ಪ್ರಕಾಶ್ ಪಾಲೇಕರ್, ಗಣಪತಿ ಇನ್ನಿತರ ಸ್ನೇಹಿತರು ವಿನಾಯಕ ವೃತ್ತದಲ್ಲಿ ತಂಪು ಪಾನೀಯವನ್ನು ವಿತರಣೆ ಮಾಡುವುದರೊಂದಿಗೆ ಭಾವೈಕ್ಯತೆ ಮೆರೆದರು.

Leave a Comment