ತೀರ್ಥಹಳ್ಳಿ

ಗುಂಪು ಆಟ ಸ್ಪರ್ಧೆ ; ವಾಟಗಾರು ಮೊರಾರ್ಜಿ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ : ಶಿಕ್ಷಣ ಇಲಾಖೆಯು ಇದೇ ಸೆಪ್ಟೆಂಬರ್ 20 ರಂದು ತಾಲೂಕಿನ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಗದ್ದೆ ಶಾಲಾ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ದೇವಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಟಗಾರು ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಗುಂಪು ಆಟ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

inshot_20250922_0841404481671349994844343959.jpg

ಬಾಲಕರ ಖೋಖೋ ಪಂದ್ಯಾವಳಿಯಲ್ಲಿ ಪ್ರಜ್ವಲ್, ದೀಕ್ಷಿತ್ ಹೆಚ್., ಶ್ರೇಯಸ್, ಪ್ರಥಮ್ ಕೆ.ಎಂ, ವಿಜಯ, ವಿಶ್ವಾಸ್, ಮೋಹನ್ ಕುಮಾರ್, ಹರ್ಷ, ಮಧು, ಯಶ್ವಂತ್ ಎನ್.ಆರ್, ದರ್ಶನ್ ಆರ್, ಗಗನ್ ಬಿ.ಎನ್ ಹಾಗೂ ಬಾಲಕಿಯರ ಕಬಡ್ಡಿಯಲ್ಲಿ ವಂದನ, ರೂಪಶ್ರೀ ಎಸ್, ಬಿಂದು ಕುಮಾರಿ, ಸಿಂಚನಾ ಪಿ.ಯು, ಮಂಗಳ, ಸಂಜನ, ಲಿಖಿತ, ಸಾನಿಧ್ಯ, ಸೃಷ್ಠಿ, ದೀಕ್ಷಾ, ಲಿಖಿತ ಯು, ಮಲ್ಲಿಕಾ ಪ್ರತಿನಿಧಿಸಿದ್ದರು.

ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆಟಗಾರ ಪುನೀತ್ ಕುಮಾರ್ ತರಬೇತಿ ನೀಡಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಚಾರ್ಯ, ಶಿಕ್ಷಕ ವೃಂದ ಹಾಗೂ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Comment