ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಅಗತ್ಯ ; ಡಾ. ಹೇಮಂತ್

Written by Mahesha Hindlemane

Published on:

ರಿಪ್ಪನ್‌ಪೇಟೆ ; 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಪ್ರತಿ ಆರು ತಿಂಗಳಿಗೊಮ್ಮ ಹೃದಯ ತಪಾಸಣೆಯೊಂದಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯದಲ್ಲಿನ ಸಮಸ್ಯೆಯನ್ನು ತಳಿಯಬಹುದು ಎಂದು ಮೆಗ್ಗಾನ್ ಆಸ್ಪತ್ರೆಯ ಹೃದಯ ತಜ್ಞೆ ಡಾ. ಹೇಮಂತ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗ ವೈದಕೀಯ ವಿಜ್ಞಾನ ಸಂಸ್ಥೆ ಹಾಗೂ ಬಿಜೆಪಿ ಮಂಡಲ ಮತ್ತು ಮಹಾಶಕ್ತಿ ಕೇಂದ್ರದವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಆರೋಗ್ಯದಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರತಿ ಆರು ತಿಂಗಳಿಗೊಮ್ಮೆ ತಜ್ಞ ವೈದ್ಯಾಧಿಕಾರಿಗಳ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯದಿಂದಿರಲು ಸಾಧ್ಯ ಎಂದರು.

ಅರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ ಉದ್ಘಾಟಿಸಿದರು. ಮೆಗ್ಗಾನ್ ಅಸ್ಪತ್ರೆಯ ವೈದ್ಯ ಡಾ.ಆಶಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಜನಪ್ಪ, ಸರ್ಜಿ ಅಸ್ಪತ್ರೆಯ ಮಾರುಕಟ್ಟೆ ಅಧಿಕಾರಿ ಮಹೇಶ, ಹಿರಿಯ ಆರೋಗ್ಯ ಕಾರ್ಯಕರ್ತೆ ಗಾಯಿತ್ರಿ,ಪೂಜಾ ಅಜಿತ್‌ಲಾಡ್, ಆಶಾಪ್ರದೀಪ, ವಿನಂತಿ ನವೀನ, ಪದ್ಮಾವತಿ ಯೋಗೇಂದ್ರ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಆರ್.ರಾಘವೇಂದ್ರ, ಎಂ.ಎನ್.ಸುಧಾಕರ್, ನಾಗರತ್ನ ದೇವರಾಜ್, ಪದ್ಮಸುರೇಶ್, ಲೀಲಾ ಉಮಾಶಂಕರ್, ಸುಂದರೇಶ್, ಎಂ.ರಾಮಚಂದ್ರ, ಜಿ.ಡಿ.ಮಲ್ಲಿಕಾರ್ಜುನ, ದೀಪಾ ಸುದೀರ್, ರೇಖಾರವಿ, ಆಶಾ ಬಸವರಾಜ, ದೇವೇಂದ್ರಪ್ಪಗೌಡ, ಮೆಣಸೆ ಆನಂದ, ಸೀತಾ, ಗೀತಾ, ಶೈಲಾ ಆರ್.ಪ್ರಭು, ಮುರುಳಿಧರ ಕೆರೆಹಳ್ಳಿ, ಸುಧೀರ್ ಪಿ.ಷಾಜಿ, ನಾಗಾರ್ಜುನಸ್ವಾಮಿ, ಕಲ್ಲೂರು ನಾಗೇಂದ್ರ ಹಾಗೂ ಆಶಾ ಕಾರ್ಯಕರ್ತೆಯರು, ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿವರ್ಗ ಹಾಜರಿದ್ದರು.

Leave a Comment