ಮೆಸ್ಕಾಂನ ಐಟಿ ನಿರ್ವಹಣಾ ಕಾರ್ಯದ ಹಿನ್ನೆಲೆ ಆನ್‌ಲೈನ್ ಸೇವೆಗಳು ಅಕ್ಟೋಬರ್ 24 ರಿಂದ 25 ರವರೆಗೆ ಸ್ಥಗಿತ

Written by Koushik G K

Published on:

ಶಿವಮೊಗ್ಗ: ಮೆಸ್ಕಾಂ ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಮೆಸ್ಕಾಂನ ಹಲವು ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಕ್ಟೋಬರ್ 24ರ ರಾತ್ರಿ 8.00 ಗಂಟೆಯಿಂದ ಅಕ್ಟೋಬರ್ 25ರ ಮಧ್ಯಾಹ್ನ 1.00 ಗಂಟೆಯವರೆಗೆ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು ನಗರ ಪ್ರದೇಶಗಳ ಗ್ರಾಹಕರಿಗೆ ಈ ನಿರ್ಬಂಧ ಅನ್ವಯವಾಗಲಿದೆ.

ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸ ಸಂಪರ್ಕ ಸೇರಿದಂತೆ ಎಲ್ಲಾ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗ್ರಾಹಕರು ಹೆಚ್ಚಾಗಿ ಬಳಸುವ ಮೆಸ್ಕಾಂನ ಅಧಿಕೃತ ಜಾಲತಾಣ (www.mescom.org.in), ಮೊಬೈಲ್ ಆಪ್ (ನನ್ನ ಮೆಸ್ಕಾಂ), ಕರ್ನಾಟಕ ಒನ್ ಕೌಂಟರ್‌ಗಳು, ಅಂಚೆ ಕಚೇರಿ ಪಾವತಿ ಕೌಂಟರ್‌ಗಳು, ಹಾಗೂ ಬಿ.ಬಿ.ಪಿ.ಎಸ್. (BBPS) ಚಾನಲ್‌ಗಳು ಈ ಅವಧಿಯಲ್ಲಿ ಕಾರ್ಯನಿರ್ವಹಿಸವುದು ಸಾಧ್ಯವಿಲ್ಲ.

ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ – “ಐಟಿ ವ್ಯವಸ್ಥೆಯ ಸುಧಾರಣೆಗಾಗಿ ಕೈಗೊಂಡಿರುವ ಈ ನಿರ್ವಹಣಾ ಕಾರ್ಯದ ಅವಧಿಯಲ್ಲಿ ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿಯನ್ನು ಮುಂಚಿತವಾಗಿ ಅಥವಾ ನಿರ್ವಹಣಾ ಅವಧಿ ನಂತರ ಪಾವತಿಸಲು ಮೆಸ್ಕಾಂ ಗ್ರಾಹಕರಿಗೆ ವಿನಂತಿ ಮಾಡಲಾಗಿದೆ.

ಪೊಲೀಸ್‌ ಹುತಾತ್ಮರ ದಿನಾಚರಣೆ: ಕರ್ತವ್ಯದಲ್ಲಿ ಪ್ರಾಣ ತ್ಯಾಗಿಸಿದ ಯೋಧರಿಗೆ ನಮನ

Leave a Comment