ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯೆ ಸಹಕಾರಿ ; ಶಾಸಕ ಬೇಳೂರು ಗೋಪಾಲಕೃಷ್ಣ

Written by Mahesha Hindlemane

Published on:

ಹೊಸನಗರ : ಇಡೀ ದೇಶದ, ವಿಶ್ವದ ಭವಿಷ್ಯ ವಿದ್ಯೆಯಿಂದ ಮಾತ್ರ ಉಜ್ವಲಗೊಳಿಸಬಹುದು ಪ್ರತಿಯೊಬ್ಬರಿಗೂ ವಿದ್ಯೆಯ ಮುಖ್ಯ. ವಿದ್ಯೆ ಕಲಿತವರು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ವಿದ್ಯೆಯಿಂದ ವಿಶ್ವವನ್ನು ಗೆಲ್ಲಬಹುದೆಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಪದವಿಪೂರ್ವ ಕಾಲೇಜ್‌ನ ಆವರಣದಲ್ಲಿ ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ವಿವೇಕ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ ರೂ.ಗಿಂತಲೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ ನಾಲ್ಕು ಕೊಠಡಿಯನ್ನು ನಿರ್ಮಿಸುವುದರ ಜೊತೆಗೆ ವಿವಿಧ ದಾನಿಗಳ ಕೊಡುಗೆಯಿಂದ ಕುಡಿಯುವ ನೀರಿನ ಟ್ಯಾಂಕ್ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ ರವರ ಸಹಾಯಹಸ್ತದಿಂದ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ 500 ಖುರ್ಚಿಗಳನ್ನು ಕೊಡುಗೆಯಾಗಿ ನೀಡಲಾಗಿದ್ದು ಇವುಗಳೆಲ್ಲವುಗಳ ಉದ್ಘಾಟನೆಯನ್ನು ಶಾಸಕರು ನೆರವೇರಿಸಿ ಮಾತನಾಡಿದರು.

30 ವರ್ಷಗಳ ಹಿಂದೆ ಓದಬೇಕು ಕಲಿಯಬೇಕು ಎಂದು ಮನಸ್ಸಿದ್ದರೂ ಮನೆಯ ಬಡತನದಿಂದ ಓದಲು ಸಾಧ್ಯವಾಗುತ್ತಿರಲ್ಲಿಲ್ಲ ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ಕಾಲ ಬದಲಾವಣೆಯಾಗಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯೆಗಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದೆ ಅದರ ಜೊತೆಗೆ ನುರಿತ ಶಿಕ್ಷಕರನ್ನು ಉಪನ್ಯಾಸಕರನ್ನು ನೀಡುತ್ತಿದೆ ಸುಸಜ್ಜಿತ ಕಟ್ಟಡ. ಕಟ್ಟಡಕ್ಕೆ ಬೇಕಾಗುವ ಸುಂದರ ವತಾವರಣವನ್ನು ನೀಡುತ್ತಿದೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದೆ ಪ್ರತಿಯೊಬ್ಬರು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಈ ದೇಶದ ಮತ್ತು ನಿಮ್ಮ ತಂದೆಯರ ಆಸೆಗಳನ್ನು ಈಡೇರಿಸಬೇಕು. ನಿಮ್ಮ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು ಪ್ರತಿಯೊಬ್ಬರು ಓದಿನ ಕಡೆಗೆ ಹೆಚ್ಚಿನ ಶ್ರಮ ವಹಿಸಿ ಇಡೀ ಜಿಲ್ಲೆಯ ಕೀರ್ತಿಪಾತಕೆಯನ್ನು ರಾಜ್ಯದತ್ತ ಸೆಳೆಯುವಂತೆ ಮಾಡಬೇಕು. ನಿಮಗೆ ಯಾವುದೇ ಸೌಲತ್ತುಗಳನ್ನು ನಾನು ಶಾಸಕನಾಗಿ ಇರುವ ತನಕ ಮಾಡಿಕೊಡುತ್ತೇನೆಂದರು.

ಕಾಲೇಜಿನ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ ; ಎಂ.ಪಿ. ಸುರೇಶ್

ಎರಡು ವರ್ಷಗಳ ಹಿಂದೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷನಾಗಿ ಬಂದಾಗ ನೀರಿನ ವ್ಯವಸ್ಥೆ ಸರಿಯಿಲ್ಲ ಶೌಚಾಲಯದ ವ್ಯವಸ್ಥೆ ಸರಿ ಇರಲಿಲ್ಲ. ನಾನು ಬಂದ ಮೇಲೆ ಬೇಳೂರು ಗೋಪಾಲಕೃಷ್ಣರವರ ಸಹಾಯ ಹಸ್ತದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವುದರ ಜೊತೆಗೆ ಸುಮಾರು 600 ವಿದ್ಯಾರ್ಥಿಗಳು ಪಿಯುಸಿ ತರಗತಿಯಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದೇವೆ. ಸಾಕಷ್ಟು ದಾನಿಗಳಿಂದ ಶಾಲೆಯ ಅಭಿವೃದ್ಧಿಗಾಗಿ ಸಹಾಯ ಹಸ್ತ ಪಡೆದು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಕೊಠಡಿ ಕೊರತೆಯನ್ನು ಬಗೆಹರಿಸಿದ್ದೇನೆ. ಈ ಕಾಲೇಜ್ ಅಭಿವೃದ್ಧಿ ಪಡೆಯಲು ಈ ಕಾಲೇಜಿನ ಎಲ್ಲ ಉಪನ್ಯಾಸಕರು ಕಾರಣರಾಗಿದ್ದು ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಪಿ ಸುರೇಶ್ ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಸ್ವಾಮಿರಾವ್, ಉಪಾಧ್ಯಕ್ಷ ಎಂ.ಪಿ ಸುರೇಶ್, ತಹಶೀಲ್ದಾರ್ ಭರತ್ ರಾಜ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್, ಶಂಕರ ಗೌಡ ಪಾಟೀಲ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಿದಂಬರ, ಬಸವರಾಜ್ ಗಗ್ಗ, ಚಂದ್ರಶೇಖರ, ರುದ್ರೇಶ್, ಕೃಷ್ಣಮೂರ್ತಿ, ಸದಾಶಿವ ಶ್ರೇಷ್ಠಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಲತಾ ಚಂದ್ರಶೇಖರ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಚಂದ್ರಮೌಳಿ, ಪ್ರಭಾಕರ್, ದುಮ್ಮ ವಿನಯ್‌ಕುಮಾರ್ ಎಲ್ಲಾ ಉಪನ್ಯಾಸಕ ವರ್ಗ ಸಿಬ್ಬಂದಿಗಳ ವರ್ಗ, ಸಾಕಷ್ಟು ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕೊಠಡಿ ಕಾಮಗಾರಿಯಲ್ಲಿ ಹಾಗೂ ಕಾಲೇಜಿನ ನೀಡಿದ ದಾನಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Leave a Comment