ಹೊಸನಗರ ನೂತನ ಬಿಇಒ ಆಗಿ ವೈ. ಗಣೇಶ್ ಅಧಿಕಾರ ಸ್ವೀಕಾರ ; ಹರಿದು ಬಂದ ಅಭಿನಂದನೆಯ ಮಹಾಪೂರ

Written by Mahesha Hindlemane

Published on:

ಹೊಸನಗರ ; ಕಳೆದ ನಾಲ್ಕು ತಿಂಗಳಿನಿಂದ ತಾಲೂಕಿನಲ್ಲಿ ಪ್ರಭಾರ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಸುತ್ತಿದ್ದ ಚೇತನಾ ಅವರು ತೀರ್ಥಹಳ್ಳಿ ತಾಲೂಕು ಕ್ಷೇತ್ರ ಸಂಪನ್ಮೂಲ ಅಧಿಕಾರಿಯಾಗಿ ಪದೋನತ್ತಿ ಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ, ತೆರವಾಗಿದ್ದ ಸ್ಥಾನಕ್ಕೆ ಶಿಕ್ಷಣಾಧಿಕಾರಿಯಾಗಿ ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಸುತ್ತಿದ್ದ ವೈ. ಗಣೇಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಅವರು ಗುರುವಾರ ಇಲಾಖೆಯ ನೂರಾರು ಹಿತೈಷಿಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ದಕ್ಷ, ಸರಳ ಹಾಗೂ ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಇವರು ಈ ಹಿಂದೆ ಇಲ್ಲಿನ ಬಿ ಆರ್ ಸಿ ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕು ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು, ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದ್ದು ಗಣೇಶ್ ಅವರನ್ನು ಕರ್ತವ್ಯ ನಿಷ್ಠೆಯನ್ನು ಸಾಕ್ಷೀಕರಿಸಿತ್ತು.

ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಡಿ ಸೋಮಶೇಖರ್, ಕಾರ್ಯದರ್ಶಿ ಪೃಥ್ವಿರಾಜ್, ಮಾಜಿ ಅಧ್ಯಕ್ಷ ಬಸವಣ್ಯಪ್ಪ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ಕಾರ್ಯದರ್ಶಿ ಕತ್ರಿಕೊಪ್ಪ ಪುಟ್ಟಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿನಯ್ ಹೆಗ್ಡೆ ಕರ್ಕಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ವೈ.ಕೆ. ರಂಗನಾಥ್, ಜಯನಗರ ಪ್ರೌಢಶಾಲೆ ಮುಖ್ಯ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ಜಗದೀಶ್ ಕಾಗಿನೆಲೆ, ನಾಗರಾಜ್ ಎಸ್. ಪಿ., ಪ್ರದೀಪ್, ಗಣೇಶ್, ಕರಿಬಸಪ್ಪ, ಲಕ್ಷ್ಮಣ, ರೇಣುಕೇಶ್, ಶಿವಪ್ಪ, ಶಿವಮೂರ್ತಿ, ತೀರ್ಥಹಳ್ಳಿ ಬಿಇಒ ಗಿರಿರಾಜ್, ಪ್ರಭಾರ ಸಿಡಿಪಿಒ ಪ್ರವೀಣ್ ಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಪ್ಪ, ದೈಹಿಕ ಪರಿವಿಕ್ಷಕ ರಮೇಶ್, ಎಂ.ಸಿ. ಮಂಜಣ್ಣ, ಶಿಕ್ಷಕಿ ರೇಖಾ ಕುಲಾಲ್, ಬಿ.ಆರ್.ಸಿ ಲತಾ, ಸ್ನೇಹ, ಜಯಂತಿ, ರೂಪ ಸೇರಿದಂತೆ ಹಲವರು ಹಾಜರಿದ್ದು ಶುಭ ಕೋರಿದರು.

ಬಿ.ಇ.ಒ ಬಂದಾಯ್ತು, ನೌಕರ ವರ್ಗ ಬರುವುದು ಯಾವಾಗ ?

ಹೊಸನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿ ಏಳು ಹುದ್ದೆ ಖಾಲಿ ಇದೆ ಎಂದು ‘ಮಲ್ನಾಡ್ ಟೈಮ್ಸ್’ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತ ಶಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿದೆ ಇನ್ನೂ ಉಳಿದ 6 ಹುದ್ದೆಗಳು ಖಾಲಿ ಇದ್ದು ಹಾಗೂ ವಿವಿಧ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ಭರ್ತಿ ಮಾಡುವುದು ಯಾವಾಗ? ಎಂಬ ಚರ್ಚೆ ಆರಂಭವಾಗಿದ್ದು ತಕ್ಷಣ ಭರ್ತಿ ಮಾಡಲಿ.

Leave a Comment