ಅಡಿಕೆ ತೋಟದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಸಾವು !

Written by Mahesha Hindlemane

Published on:

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಗ್ರಾಮದ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಮಂಜುನಾಥ್ (37) ಮೃತ ದುರ್ಧೈವಿ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗುತಿದ್ದು ತೋಟದ ಕಂದು ದಾಟುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದ ಎನ್ನಲಾಗುತ್ತಿದ್ದು ಯುವಕನನ್ನು ತೋಟದ ಮಾಲೀಕರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ ಅಷ್ಟರಲ್ಲಾಗಲೇ ಯುವಕ ಸಾವನ್ನಪ್ಪಿದ್ದ ಎನ್ನಲಾಗಿದೆ.

ಕುಟುಂಬಸ್ಥರ ಆರೋಪವೇನು?

ಗವಟೂರಿನ ಜಗದೀಶ್ ಎಂಬುವವರ ತೋಟದಲ್ಲಿ ಇಂದು ಬೆಳಿಗ್ಗೆ ಮಂಜುನಾಥ್ ಅಡಿಕೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ಫೋನ್ ಕರೆ ಮಾಡಿ ಇನ್ನೂ ಸ್ವಲ ಅಡಿಕೆ ಗೊನೆ ತೆಗೆಯುವುದಿದೆ‌ ಮುಗಿಸಿ ಬರುತ್ತೇನೆ ಎಂದು ಹೇಳಿದ್ದನು ಆದರೆ 3.45 ರ ಹೊತ್ತಿಗೆ ಅವರೇ ಆಸ್ಪತ್ರೆಗೆ ಕರೆತಂದಿದ್ದಾರೆ ಆದರೆ ನಮ್ಮ ಬಳಿ ಇಂದು ಆತ ಕೆಲಸ ಮಾಡಲು ಬರಲಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಹಾಗೂ ಆತನ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಯಲ್ಲಿ ಶವ ಇರಿಸಿ ಹೋಗಿದ್ದಾರೆ. ಆದ್ದರಿಂದ ಈ ಘಟನೆ ಬಗ್ಗೆ ನಮಗೆ ಅನುಮಾನವಿದೆ. ಪೊಲೀಸರು ಸೂಕ್ತ ತನಿಖೆ ಮಾಡಲಿ ಎಂದು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಪಿಎಸ್ಐ ರಾಜುರೆಡ್ಡಿ ಹಾಗೂ ಸಿಬ್ಬಂದಿಗಳು ತೋಟದ ಮಾಲೀಕರನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಗೊಂದಲವುಂಟಾಗಿ‌ ಕುಟುಂಬಸ್ಥರು ಹಾಗೂ ತೋಟದ ಮಾಲೀಕರ ನಡುವೆ ಮಾತಿನ ಚಕಮಕಿ ಪ್ರಾರಂಭವಾದ ಹಿನ್ನೆಲೆಯಲ್ಲಿ ತೋಟದ ಮಾಲೀಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಪ್ರಾರಂಭಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Leave a Comment