Karnataka Rain | ರಾಜ್ಯದಲ್ಲಿ ನಿನ್ನೆಯಿಂದ ಮುಂಗಾರು (Monsoon) ಚುರುಕಾಗಿದ್ದು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮಳೆ (Rain) ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.
ರಾಜ್ಯಕ್ಕೆ ಜೂ.2 ರಿಂದ ಮುಂಗಾರು ಆಗಮಿಸಿದ್ದು ಒಂದು ವಾರ ಕಳೆದಿದೆ. ಆದರೆ, ಹೇಳುವಷ್ಟು ಎಲ್ಲೂ ಮಳೆಯಾಗಿಲ್ಲ. ಶನಿವಾರದಿಂದ ಮಳೆ ವೇಗ ಪಡೆದುಕೊಂಡಿದೆ.
ಇಂದಿನಿಂದ ಕರಾವಳಿಯ ಉತ್ತರ ಕನ್ನಡ (Uttara Kannada), ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಉತ್ತರ ಒಳನಾಡಿನ ಬಾಗಲಕೋಟೆ (Bagalakote), ಹಾವೇರಿ (Haveri) ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಹಾಸನ, ತುಮಕೂರು, ವಿಜಯಪುರ, ಮೈಸೂರು, ರಾಮನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನೂ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕಿರಿಮಂಜೇಶ್ವರದಲ್ಲಿ ರಾಜ್ಯದಲ್ಲೇ ಅತ್ಯಧಿಕ 17.5 ಸೆಂ.ಮೀ. ಮಳೆಯಾಗಿದೆ..
Read More
4 ಲಕ್ಷ ರೂ. ಹಣವಿದ್ದ ಬ್ಯಾಗ್ ಹೋಟೆಲ್‌ನಲ್ಲಿ ಬಿಟ್ಟು ಹೋದ ಗ್ರಾಹಕ, ವಾಪಾಸ್ ಬಂದು ನೋಡಿದಾಗ ಆತನಿಗೆ ಕಾದಿತ್ತು ಶಾಕ್ !
Accident | ಕಾರು ಮತ್ತು ಓಮ್ನಿ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲಿಯೇ ಸಾವು !