ಮೌಲ್ಯಯುತ ಶಿಕ್ಷಣದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ; ಶಾಸಕ ಬೇಳೂರು

0 212

ರಿಪ್ಪನ್‌ಪೇಟೆ: ಮಕ್ಕಳಿಗೆ ನೈತಿಕ ಸ್ಥೈರ್ಯ ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿಹೊಂದಲು ಸಾಧ್ಯವೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಾರ್ಷೀಕೋತ್ಸವ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜೀವನದಲ್ಲಿ ಬರೀ ಪಠ್ಯಕ್ಕೆ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುವುದು ಎಂದ ಅವರು ಮಕ್ಕಳಲ್ಲಿನ ವಿಶೇಷ ಪ್ರತಿಭೆ ಗುರುತಿಸಿ ಶಕ್ತಿ ತುಂಬುವ ಕಾರ್ಯ ಆಗಬೇಕಿದೆ. ಇದರಿಂದ ದೇಶದ ಏಳಿಗೆ ಸಾಧ್ಯವೆಂದರು.

ಎಸ್.ಡಿ.ಎಂ.ಸಿ.ಅಧ್ಯಕ್ಷ ಬಿ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಆರ್.ಕೆ.ಮೂರ್ತಿ ಟ್ರಸ್ಟ್ ವ್ಯವಸ್ಥಾಪಕ ಜಿ.ಆರ್.ಗೋಪಾಲಕೃಷ್ಣ ಸಮಾರೋಪ ಭಾಷಣ ಮಾಡಿದರು.
ವಸ್ತು ಪ್ರದರ್ಶನವನ್ನು ಹೊಸನಗರ ತಾಲ್ಲೂಕ್ ಒಕ್ಕಲಿಗರ ಸಂಘದ ಆಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ವಿ.ನಿರೂಪ್‌ಕುಮಾರ್ ಲಕ್ಕಿಡಿಪ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ವಿ.ನಿರೂಪ್‌ಕುಮಾರ್, ದಾನಮ್ಮ, ಆಸಿಫ್‌ಭಾಷಾ, ಡಿ.ಈ.ಮಧುಸೂಧನ್, ಮಂಜುಳಾ, ಪ್ರಕಾಶಪಾಲೇಕರ್, ಗಣಪತಿ, ಪಿ.ರಮೇಶ್, ಎನ್.ಚಂದ್ರೇಶ್, ಸಾರಾಭಿ, ವನಮಾಲ, ಅಶ್ವಿನಿ, ದೀಪಾ, ವೇದಾವತಿ, ನಿರುಪಮಾ, ವಿನೋಧ, ಮಹಾಲಕ್ಷ್ಮಿ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ನಗೀನಾ, ಸದಸ್ಯರಾದ ಸುರೇಶ್, ಭೀಮರಾಜ್, ಶಶಿಭೂಷಣ, ಹೆಚ್.ಎನ್.ಉಮೇಶ, ಕಾಂತರಾಜ್, ಮಹಮ್ಮದ್‌ರಫಿ, ಉಮೇಶ, ಪ್ರದೀಪ, ಕವಿತ, ರಾಜೇಶ್ವರಿ, ಸೌಮ್ಯ, ದಿವ್ಯಾ, ಸವಿತಾ, ನಜ್ಮಾ, ಲಕ್ಷ್ಮಿ, ಶೃತಿ, ಮೈತ್ರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಜಗದೀಶ ಕಾಗಿನಲಿ, ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಮಂಜುನಾಥ, ಬಡ್ತಿ ಮುಖ್ಯೋಪಾಧ್ಯಾಯ ರೇಣುಕಪ್ಪ, ಶ್ರೀಧರ, ಇನ್ನಿತರರು ಭಾಗವಹಿಸಿದ್ದರು.

Leave A Reply

Your email address will not be published.