ಆಶ್ರಯ ಯೋಜನೆಗೆ ಬಂಗಾರಪ್ಪನವರ ಹೆಸರಿಡಿ ; ಆರ್ಯ ಈಡಿಗ ಸಂಘದಿಂದ ಮನವಿ

0 71

ಶಿವಮೊಗ್ಗ: ರಾಜ್ಯ ಸರ್ಕಾರದ ಆಶ್ರಯ ಯೋಜನೆಗೆ ದಿ. ಎಸ್. ಬಂಗಾರಪ್ಪ ವಸತಿ ಯೋಜನೆ ಎಂದು ನಾಮಕರಣ ಮಾಡಲು ಆಗ್ರಹಿಸಿ ಜಿಲ್ಲಾ ಆರ್ಯ ಈಡಿಗರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.


ಬಂಗಾರಪ್ಪನವರು ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಹಿಂದುಳಿದ ವರ್ಗಗಳ ಎಲ್ಲಾ ಜನಾಂಗದವರ ಆಶಾಕಿರಣ ಆಗಿದ್ದವರು. ಹಲವು ಯೋಜನೆಗಳನ್ನು ಜಾರಿಗೆ ತಂದವರು. ಅದರಲ್ಲಿ ಆಶ್ರಯ ಯೋಜನೆ ತುಂಬಾ ಜನಪ್ರಿಯವಾಗಿತ್ತು. ಈ ಆಶ್ರಯ ಯೋಜನೆ ಜೊತೆ ಆರಾಧನಾ, ವಿಶ್ವ, ಗ್ರಾಮೀಣ ಕೃಪಾಂಕ, ರೈತರಿಗೆ ಉಚಿತ ವಿದ್ಯುತ್ ಹೀಗೆ ಹಲವು ಯೋಜನೆಗಳನ್ನು ರೂಪಿಸಿದವರು ಎಂದು ಮನವಿದಾರರು ತಿಳಿಸಿದರು.


ಅ.26ಕ್ಕೆ ಅವರಿಗೆ 90 ವರ್ಷ ತುಂಬುತ್ತಿತ್ತು. ಇದರ ಅಂಗವಾಗಿ ಬಂಗಾರಪ್ಪ ಅವರ ಹೆಸರನ್ನು ಆಶ್ರಯ ಯೋಜನೆಗೆ ಅಥವಾ ಆರಾಧನಾ ಯೋಜನೆಗೆ ನಾಮಕರಣ ಮಾಡಿ ಆ ಮೂಲಕ ಕರ್ನಾಟಕದ ಜನತೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಉದಯಕುಮಾರ್, ಕೆ.ಜಿ. ರಾಮಚಂದ್ರಪ್ಪ, ಪರಶುರಾಮಪ್ಪ, ಕೃಷ್ಣಮೂರ್ತಿ, ಕೃಷ್ಣಪ್ಪ, ರುದ್ರಪ್ಪ ಎ.ಬಿ., ರಘುಪತಿ, ರಾಜಪ್ಪ ಎಂ.ಬಿ. ಮುಂತಾದವರಿದ್ದರು.

Leave A Reply

Your email address will not be published.

error: Content is protected !!