ಜ.12 ರಂದು ಬುದ್ಧನ ಕಡೆಗೆ ದಸಂಸ ನಡಿಗೆ ಜನಜಾಗೃತಿ ಸಮಾವೇಶ ; ಜಿಲ್ಲಾ ಸಂಚಾಲಕ ನಾಗರಾಜ್ ಅರಳಿಸುರಳಿ

Written by Mahesha Hindlemane

Published on:

ಹೊಸನಗರ ; ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ದಿ|| ಲಕ್ಷ್ಮಿನಾರಾಯಣ ನಾಗವಾರರವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ತೀರ್ಥಹಳ್ಳಿಯ ಬಂಟರ ಭವನದ ಸಭಾಭವನದ ಆವರಣದಲ್ಲಿ ಜನವರಿ 12ರ ಸೋಮವಾರ ಬೆಳಿಗ್ಗೆ 10ಗಂಟೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬುದ್ಧನ ಕಡೆಗೆ ದಲಿತ ಸಂಘರ್ಷ ಸಮಿತಿ ನಡಿಗೆ ರಾಜ್ಯ ಮಟ್ಟದ ಜನಜಾಗೃತಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ಅರಳಿಸುರಳಿ ನಾಗರಾಜ್‌ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ದಮನಿತ ಶೋಷಿತರ ಪರವಾಗಿ ಹೋರಾಟ ಮಾಡಿದ್ದಾರೆ. ಷೋಷಿತ ಸಮಾಜದ ಪರವಾಗಿ ಆನೇಕ ವರ್ಷಗಳ ಕಾಲ ಹೋರಾಟ ನಡೆಸಿದ ಲಕ್ಷ್ಮೀನಾರಾಯಣ ನಾಗವಾರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದ್ದು ಶೋಷತರ ಪರವಾಗಿ ಅವರ ಜೀವನವನ್ನು ಮುಡಿಪಾಗಿಟ್ಟು ಶೋಷಿತ ಸಮಾಜಕ್ಕೆ ನ್ಯಾಯ ಒದಾಗಿಸಬೇಕು ಎಂದು ಹೋರಾಟ ನಡೆಸಿದವರು ನಿರಂತರ ಶ್ರಮಿಸಿದವರು ಅಂತಹ ನಾಯಕನ ಸ್ಮರಣೆ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಉದ್ಧೇಶ ಸಮಾವೇಶದ್ದಾಗಿದೆ ಎಂದರು.

ಈ ಸಮಾವೆಶದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ ಅಧ್ಯಕ್ಷ ಶಾಸಕ ಅಬ್ಬಯ್ಯ ಪ್ರಸಾದ್ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ‌. ಶರಾವತಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಆರ್.ಡಿ ಮಲ್ಲಯ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜನವರಿ 12ರಂದು ನಡೆಯುವ ಲಕ್ಷ್ಮೀನಾರಾಯಣ ನಾಗವಾರರವರ ಪುಣ್ಯಸ್ಮರಣೆಗೆ ರಾಜ್ಯಾದ್ಯಂತ ಕಾರ್ಯಕರ್ತರು ಆಗಮಿಸಲಿದ್ದು ಅವರೊಂದಿಗೆ ಹೊಸನಗರ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ಎಲ್ಲ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

ಪತ್ರಿಕಾಘೋಷ್ಠಿಯಲ್ಲಿ ತಾಲ್ಲೂಕು ಸಂಚಾಲಕ ಜಯನಗರ ಗುರು, ಮತ್ತಿಮನೆ ಸಂದೇಶ್, ಗಂಗನಕೊಪ್ಪದ ನಾರಾಯಣ, ಮತ್ತಿಮನೆ ಚಂದ್ರ, ಸುಬ್ರಹ್ಮಣ್ಯ, ಗಂಗನಕೊಪ್ಪ ಸುರೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment