ಮತದಾರರ ಪಟ್ಟಿ ; ಮ್ಯಾಪಿಂಗ್‌ಗೆ ಹೊಸನಗರ ತಹಸೀಲ್ದಾರ್ ಸೂಚನೆ

Written by Mahesha Hindlemane

Published on:

ಹೊಸನಗರ ; ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ 2002ರ ನಂತರ ಮದುವೆಯಾಗಿ ಬಂದವರು ಅಥವಾ ಸ್ಥಳಾಂತರಗೊಂಡವರು/ಹೊಸದಾಗಿ ಸೇರ್ಪಡೆಯಾದವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ (ಬಿಎಲ್‌ಒ) ಮತಗಟ್ಟೆ ಮಟ್ಟದ ಅಧಿಕಾರಿಗಳ ಮುಖಾಂತರ ಮ್ಯಾಪಿಂಗ್ ಮಾಡಿಕೊಳ್ಳಬೇಕೆಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮತದಾರರು ತಾವು ಮತ ಚಲಾತಿಸುತ್ತಿದ್ದ ನಿಮ್ಮ ಮತಗಟ್ಟೆಯ ಬಿಎಲ್ಒರವರ ಬಳಿ ಹೋಗಿ ತಮ್ಮ ಹೆಸರುಗಳು ಇದೆಯೇ? ಇದ್ದರೆ ಮ್ಯಾಪಿಂಗ್ ಹಾಗೂ ಪ್ರೋಜೆನಿ (ಸಂತತಿ) ಆಗಿದೆಯೇ? ಅಥವಾ ಇಲ್ಲವೇ? ಎಂಬುದನ್ನು ಕೂಡಲೇ ಪರೀಕ್ಷಿಸಿಕೊಳ್ಳಿ. ಹೆಚ್ಚಿನ ಮಾಹಿತಿಯನ್ನು ತಮ್ಮ ಮತಗಟ್ಟೆ ವ್ಯಾಪ್ತಿಯ ಬಿಎಲ್ಒರಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ :

2002ರ ನಂತರ ಮದುವೆಯಾಗಿ ಗಂಡನ ಮನೆಗೆ ಬಂದವರ ಮ್ಯಾಪಿಂಗ್ ಕಾರ್ಯ ಆಗದೇ ಇರುವುದರಿಂದ ಸೊಸೆಯಂದಿರಾದ ತಾವುಗಳು ನಿಮ್ಮ ಊರಿನ ಬಿಎಲ್ಒರನ್ನು ಸಂಪರ್ಕಿಸಿ 2002ರ ಪಟ್ಟಿಯಲ್ಲಿನ ಅಂದರೇ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಭಾಗದ ಸಂಖ್ಯೆ (ಬೂತ್), ತಂದೆ/ತಾಯಿ ನಿಮ್ಮ ಹೆಸರು ಹಾಗೂ ಕ್ರಮ ಸಂಖ್ಯೆಗಳನ್ನು ಬಿಎಲ್‌ಒ ಹತ್ತಿರ ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

ಮಾಹಿತಿಗೆ 2002ರ ಮತದಾರರ ಪಟ್ಟಿ ಲಿಂಕ್ : https://ceo.karnataka gov.in/363/electoral-roll–2002/en ಗಮನಿಸಬಹುದು.

Leave a Comment