ಹೊಸನಗರ ; ಹೊಸನಗರ ತಾಲೂಕು ಅರಣ್ಯ ಭೂಮಿ ಮತ್ತು ಸರ್ಕಾರಿ ಭೂ ಒತ್ತುವರಿ ಸಮಸ್ಯೆಗಳ ಬಗ್ಗೆ ಜ. 17 ರಂದು ಹೊಸನಗರದ ಈಡಿಗರ ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಯಿತು. ಈ ಸಭೆಯಲ್ಲಿ ರೈತ ಸಂಘಟನೆಯ ತಾಲೂಕು ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಕೋರ್ಟ್ಗೆ ನೀಡಿದ ರೈತರ ಹೆಸರುಗಳನ್ನು ಸಭೆಯ ಗಮನಕ್ಕೆ ತರಲಾಯಿತು. ಸರ್ಕಾರ ರಚನೆ ಮಾಡಿದ ಎಸ್ಐಟಿಯ ಬಗ್ಗೆ ಅದರ ಕಾರ್ಯ ವೈಖರಿಯ ಬಗ್ಗೆ ಚರ್ಚಿಸಲಾಯಿತು. ರೈತರ ಹಿತ ಕಾಪಾಡಲು ರಾಜ್ಯ, ಕೇಂದ್ರ ಸರ್ಕಾರಗಳು ವಿಫಲವಾಗಿದ್ದು, ರೈತರು ಒಗ್ಗಟ್ಟಾಗಿ ತಮ್ಮ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ದೇಶದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳಿಂದ ಅನ್ಯಾಯಕ್ಕೆ ಒಳಗಾದ ಜಿಲ್ಲೆ ಶಿವಮೊಗ್ಗವಾಗಿದ್ದು ಸರ್ಕಾರದ ಯೋಜನೆಗಳಿಂದ 75,000 ಎಕರೆ ಅರಣ್ಯ ನಾಶವಾಗಿದ್ದು, ಅದರ ಬದಲಿ ಎಲ್ಲೂ ಅರಣ್ಯ ಬೆಳೆಸದೆ ಇರುವುದನ್ನು ರೈತರ ಗಮನಕ್ಕೆ ತರಲಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ರೈತರು ಒಗ್ಗೂಡಿ ನ್ಯಾಯಾಲಯಕ್ಕೆ ಹೋಗುವ ತೀರ್ಮಾನಕ್ಕೆ ಬರಲಾಯಿತು.
ತಾಲೂಕು ಸಮಿತಿಯಲ್ಲಿ ಗ್ರಾಮವಾರು ಸಂಘಟಕನ್ನು ಆಯ್ಕೆ ಮಾಡಿಕೊಂಡಿದ್ದು ಸಮಿತಿಯಲ್ಲಿ ಬೆಳ್ಳೂರು ತಿಮ್ಮಪ್ಪ, ಬಿ.ಪಿ.ರಾಮಚಂದ್ರ, ಎರಗಿ ಉಮೇಶ್, ಎಂ.ಪಿ ರಾಜು, ರವೀಂದ್ರ ಮಾಸ್ತಿಕಟ್ಟೆ, ಬಿ.ಜಿ ನಾಗರಾಜ, ರಮೇಶ್ ಹೆಚ್.ಬಿ ಗರ್ತಿಕೆರೆ, ಗಿರೀಶ್ ಚಿಕ್ಕಜೇನಿ, ಸತೀಶ್ ನೆನೆಬಸ್ತಿ, ಮಂಜಪ್ಪ ಯಡಗುಡ್ಡೆ, ಭಾಷಾಸಾಬ್ ಅರಸಾಳು, ರಮೇಶ ನಿಲ್ಸ್ಕಲ್, ಚಂದ್ರಶೇಖರ್ ತ್ರಿಣಿವೆ, ಚಂದ್ರಶೇಖರ್ ಸಾಲ್ತೋಡಿ, ಎಂ.ಪಿ ಲೋಕೇಶ್, ಮಳಲಿ ಧರ್ಮಪ್ಪ, ವಾಸವಿ ಕೌಶಿಕ್, ಜಿ.ಎಚ್.ಕೆ ಸ್ವಾಮಿ ಹೆಬ್ಬಳ್ಳಿ, ಆಯ್ಕೆಯಾಗಿದ್ದು ಉಳಿದಂತೆ ಗ್ರಾಮ ಹಿತರಕ್ಷಣಾ ಸಮಿತಿಗಳ ರಚನೆಯ ನಂತರದಲ್ಲಿ ತಾಲೂಕು ಸಮಿತಿಯನ್ನು ಇನ್ನಷ್ಟು ಬಲಪಡಿಸಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು.
ಸಭೆಗೆ ವಿಶ್ವ ನಿಸರ್ಗ ಪುನರ್ ನಿರ್ಮಾಣ ಸಂಸ್ಥೆ ಅಧ್ಯಕ್ಷ ಗಣೇಶ್ ಬೆಳ್ಳಿಯವರು ಮಾಹಿತಿ ನೀಡಿ ಮುಂದಿನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





