ಹೊಂಬುಜ : ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ತೀರ್ಥಂಕರ, ಶ್ರೀ ಮಹಾವೀರ ತೀರ್ಥಂಕರ ಸನ್ನಿಧಿಯಲ್ಲಿ ಶ್ರಾವಕ-ಶ್ರಾವಿಕೆಯರು ‘ವಿಶ್ವ ಶಾಂತಿ ಯುವ ಸೇವಾ ಸಮಿತಿ’ ಆಯೋಜಿಸಿದ ಜಿನಸಹಸ್ರನಾಮಾರ್ಚನೆಯ ಪೂಜಾ ವಿಧಿ-ವಿಧಾನದಲ್ಲಿ ಪಾಲ್ಗೊಂಡರು.
ಆಚಾರ್ಯ ಶ್ರೀ 108 ಅನೇಕಾಂತಸಾಗರ ಮಹಾರಾಜರ ಸಂಘಸ್ಥ ಮುನಿಶ್ರೀಗಳವರ, ಆರ್ಯಿಕೆಯರ ದಿವ್ಯ ಸಾನಿಧ್ಯ ಹಾಗೂ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವ, ಮಾರ್ಗದರ್ಶನದಲ್ಲಿ ಶ್ರದ್ಧಾಭಕ್ತಿಯಿಂದ ಹೊಂಬುಜ ಶ್ರೀಮಠದ ಶ್ರೀ ಜಿನದತ್ತರಾಯ ಸಭಾಭವನದಲ್ಲಿ ಜಿನಾಗಮೋಕ್ತ ಶಾಸ್ತçದನ್ವಯ ನೆರವೇರಿತು.

ಪೂಜ್ಯ ಮುನಿಶ್ರೀಯವರು “ಜಿನನಾಮ ಸ್ತುತಿಸುವುದೆಂದರೆ ಕರ್ಮಕ್ಷಯ ಮಾಡಿದಂತಾಗುವುದು” ಎಂದು ಹೇಳಿ ಸರ್ವರನ್ನು ಹರಸಿದರು.
ಪರಮಪೂಜ್ಯ ಸ್ವಸ್ತಿಶ್ರೀಗಳವರು “ಆತ್ಮೋನ್ನತಿಯ ನೈಜ ಸನ್ಮಾರ್ಗವು ಜಿನಸಹಸ್ರನಾಮ ಅರ್ಚನೆಯ ಮೂಲಕ ಧರ್ಮಲಾಭ ದೊರಕುವುದು” ಎಂದು ಜೈನಾಚಾರ್ಯದ ಉಲ್ಲೇಖ ಮಾಡಿದರು.

ಪದ್ಮರಾಜ ಇಂದ್ರ, ಸಹಪುರೋಹಿತರು ಪೂಜಾ ವಿಧಿಗಳನ್ನು ವಿಧಿವತ್ತಾಗಿ ನೆರವೇರಿಸಿದರು. ಸುಶ್ರಾವ್ಯವಾಗಿ ಜಿನನಾಮಸ್ತುತಿಯಿಂದ ಭಕ್ತವೃಂದದವರು ಧನ್ಯರಾದರು.
ಹೊಂಬುಜದ ಶ್ರಾವಕ-ಶ್ರಾವಿಕೆಯರು, ಶ್ರೀ ಪದ್ಮಾವತಿ ಮಹಿಳಾ ಮಂಡಲ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶಿವಮೊಗ್ಗ, ಸಾಗರ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.

ವಿಶ್ವ ಸೇವಾ ಯುವ ಸಮಿತಿ ಬೆಂಗಳೂರು ಇವರ ಹಾಗೂ ವಿವಿಧ ಜೈನ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ 1.11 ಕೋಟಿ ಜಿನನಾಮಸ್ಮರಣೆ ಏಕಕಾಲದಲ್ಲಿ ಮಾಡುವ ಮೂಲಕ ವಿಶ್ವ ದಾಖಲೆಗೆ ಸೇರ್ಪಡೆಯಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





