ಭವಿಷ್ಯದಲ್ಲಿ ಹಿಂದು ಸಮಾಜ ಇನ್ನಷ್ಟು ಸಂಘಟಿತರಾಗಬೇಕು ; ಮಂಗೇಶ್ ಭೇಂಡೆ

Written by Mahesha Hindlemane

Published on:

ಹೊಸನಗರ : ಹಿಂದು ಸಮಾಜದ ಸಂಘಟನೆಗಾಗಿ ಸಮಾಜ ಬಾಂಧವರು ಒಗ್ಗೂಡಿ ಉತ್ಸವ ಆಚರಣೆಗೆ ಮುಂದಾಗಿರುವುದು ವಿಶೇಷ ಸಂಗತಿಯಾಗಿದೆ. ಅಲ್ಲದೇ, ಭವಿಷ್ಯದಲ್ಲಿ ಹಿಂದೂ ಸಮಾಜ ಇನ್ನಷ್ಟು ಜಾಗೃತಿಗೊಳ್ಳಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಅಧಿಕಾರಿ ಮಂಗೇಶ್ ಭೇಂಡೆ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ ಆಯೋಜಿಸಿದ್ದ ವಿರಾಟ್ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.

ಹಿಂದು ಸಮಾಜದ ಶ್ರೀಮಂತಿಕೆ, ಸಂಘರ್ಷಮಯ ಇತಿಹಾಸ, ಹೋರಾಟ ಕುರಿತಂತೆ ಪ್ರಸ್ತಾಪಿಸಿದ ಅವರು, ಭವಿಷ್ಯದಲ್ಲಿ ಹಿಂದು ಸಮಾಜ ಸದೃಢವಾಗಿ ಒಗ್ಗೂಡಬೇಕಿದ್ದು, ಇತಿಹಾಸದ ತಪ್ಪುಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು. 

ಕಾರ್ಯಕ್ರಮದಲ್ಲಿ ವಾಸಂತಿ ಕೊತ್ವಲ್ ಸೇರಿದಂತೆ ಪಟ್ಟಣದ ವಿವಿಧ ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿ, ಶ್ರೀಮದ್ ಭಗವದ್ಗೀತೆಯ 11ನೇ ಅಧ್ಯಾಯ ಮತ್ತು ಲಲಿತ ಸಹಸ್ರನಾಮವನ್ನು ಸಾಮೂಹಿಕವಾಗಿ ಪಡಿಸಿದರು. ಬಳಿಕ ಸಂವಾದ-ಚರ್ಚೆ ನಡೆಯಿತು. 

ಕಾರ್ಯಕ್ರಮದಲ್ಲಿ ಹಿಂದು ಪಂಚಾಂಗ, ಸಾಮರಸ್ಯ ಮಂತ್ರ, ಗೀತೆ ಮತ್ತು ಶಾಂತಿ ಮಂತ್ರಗಳ ಅಭ್ಯಾಸ ಸೇರಿದ್ದ ಹಿಂದೂ ಬಾಂಧವರ ಗಮನ ಸೆಳೆಯಿತು.

ಎನ್ ಆರ್ ದೇವಾನಂದ್ ಸ್ವಾಗತಿಸಿ, ಗಣೇಶ ಮಧುಕರ್ ನಿರೂಪಿಸಿದರು.

Leave a Comment