ಹೊಸನಗರ ; ಗುಳ್ಳೆಕೊಪ್ಪ ರವಿಕುಮಾರ್‌ರಿಗೆ ರಾಷ್ಟ್ರ ಮಟ್ಟದ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್

Written by Mahesha Hindlemane

Published on:

ಹೊಸನಗರ ; ಮಾ. 23 ರಂದು ದೆಹಲಿಯಲ್ಲಿ ನಡೆದ ಎಂ.ಎಸ್.ಎಂ.ಈ 2ನೇ ರಾಷ್ಟ್ರ ಮಟ್ಟದ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ 2026 ಭಾರತ ಸರ್ಕಾರ ವತಿಯಿಂದ ನಡೆದ ಸಮಾರಂಭದಲ್ಲಿ ಅಭಿವೃದ್ಧಿ ಕಂಟ್ರೋಲ್ ಬೆಂಗಳೂರು ಡೈರೆಕ್ಟರ್ ರವಿಕುಮಾರ್ ಎಸ್ ಮತ್ತು ಸರಿತಾ ಆರ್ ರವರಿಗೆ ಮೇಕ್ ಇನ್ ಇಂಡಿಯಾ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್ ಮ್ಯಾನುಫ್ಯಾಕ್ಟರಿಂಗ್ ಉದ್ಯಮ ನಡೆಸುತ್ತಿದ್ದು ಅನೇಕ ಸಮಾಜಮುಖಿ ಆರೋಗ್ಯ, ಕ್ರೀಡೆ, ಶಿಕ್ಷಣ ಹಾಗೂ ಸೇವಾ ಕಾರ್ಯದಲ್ಲಿ ತಮ್ಮನ್ನು ಸತತವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ ಸಿಬ್ಬಂದಿ ವರ್ಗ ಹಾಗೂ ಆತ್ಮೀಯರು ಅಭಿನಂದಿಸಿದ್ದಾರೆ.

ಈ ವೇಳೆ ಡಾ. ಇಂದ್ರಜಿತ್ ಗೋಷ್, ಪದ್ಮಶ್ರೀ, ಡಾ. ಕಾರ್ತಿಕೇಯ ಸಾರಾಭಾಯಿ ಹಾಗೂ ಡಾ. ಸಂದೀಪ್ ಪಾಂಡೆ ಮುಂತಾದವರು ಪ್ರಶಸ್ತಿ ನೀಡಿ ಗೌರವಿಸಿದರು.

ರವಿಕುಮಾರ್‌ ಹೊಸನಗರ ತಾಲ್ಲೂಕು ಗುಳ್ಳೆಕೊಪ್ಪದಲ್ಲಿ ಜನಿಸಿದ್ದು ಬೆಳೆದಿದ್ದು ಪುರಪ್ಪೆಮನೆಯಲ್ಲಿ. ಇವರು ಪುರಪ್ಪೆಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಡೆಸ್ಕ್ ಕಂಪ್ಯೂಟರ್ ವಿದ್ಯಾಥಿಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಎಲ್ಲ ಸಲಕರಣೆಗಳನ್ನು ನೀಡುವುದರ ಜೊತೆಗೆ ಆಟದ ಮೈದಾನ ರಿಪ್ಪನ್‌ಪೇಟೆಯಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುವುದರ ಜೊತೆಗೆ ಯಾರೇ ಬಡವರು ಮಧ್ಯಮ ವರ್ಗದವರಿಗೂ ಸಹಾಯಹಸ್ತ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ಓದಿಸುವುದು ವೃದ್ಧರನ್ನು ಗೌರವಿಸುವುದು. ವೃದ್ಧಾಶ್ರಮಕ್ಕೆ ಧನ ಸಹಾಯ ಮಾಡುವುದು ಹೊಸನಗರ ತಾಲ್ಲೂಕಿನ ಜನರೆಂದರೆ ಪಂಚಪ್ರಾಣ. ಒಟ್ಟಾರೆ ಸಮಾಜಕ್ಕೆ ಹಾಗೂ ಹೊಸನಗರ ತಾಲ್ಲೂಕಿಗೆ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ.

Leave a Comment