ಹೊಸನಗರ ; ಸೊನಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿಂದಿನ ಸಾಲಿನಲ್ಲಿ ಐದು ವರ್ಷಗಳ ಕಾಲ ನಿಷ್ಪಕ್ಷಪಾತ ಆಡಳಿತ ನಡೆಸಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜಿ ಸುರೇಶ ಅವಿರೋಧ ಆಯ್ಕೆಯಾಗಿದ್ದಾರೆ.
ಸುರೇಶ್ ಸುಮಾರು 15 ವರ್ಷಗಳಿಂದ ಸಹಕಾರಿ ಸೇವೆಯಲ್ಲಿದ್ದು ಸೊನಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 5 ವರ್ಷಗಳ ಕಾಲ ಅಧ್ಯಕ್ಷರಾಗಿ ನಂತರ 5 ವರ್ಷಗಳ ಕಾಲ ನಿರ್ದೆಶಕರಾಗಿ ಪುನಃ 2025-26 ರಿಂದ 2030-31ನೇ ಸಾಲಿನವರೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೊನಲೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಸಹಕಾರ ಧುರೀಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡರ ಶಿಷ್ಯರ ತಂಡ 8 ಸ್ಥಾನ ಪಡೆದುಕೊಂಡಿದೆ.
ಸೊನಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಸುರೇಶ್ ಉಪಾಧ್ಯಕ್ಷರಾಗಿ ಈಶ್ವರ ಭಂಡಾರಿ, ನಿರ್ದೆಶಕರುಗಳಾಗಿ ಸುಬ್ರಹ್ಮಣ್ಯ ಜೋಯ್ಸ್, ಲಕ್ಷ್ಮಣ, ರತ್ನಮ್ಮ, ಕಮಲಮ್ಮ, ರವೀಂದ್ರ ಎಸ್, ಸತೀಶ ಕೆ ಆಯ್ಕೆಯಾಗಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





