ಹೊಸನಗರ

ಎಸ್‌ಎಸ್‌ಎಲ್‌ಸಿ ರಿಸಲ್ಟ್ ; ಹೊಸನಗರ ತಾಲೂಕಿನ 40ರಲ್ಲಿ 29 ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ

ಹೊಸನಗರ ; ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ತಾಲೂಕಿನ 40 ಪ್ರೌಢಶಾಲೆಗಳಲ್ಲಿ 29 ಪ್ರೌಢಶಾಲೆಗಳು ಶೇ. 100 ಫಲಿತಾಂಶ ಗಳಿಸುವ ಮೂಲಕ ಶೈಕ್ಷಣಿಕ ಪ್ರಗತಿಯಲ್ಲಿ ಸಾಧನೆ ತೋರಿದ್ದು ತಾಲೂಕಿಗೆ ಶೇ.98.90 ಫಲಿತಾಂಶ ಬಂದಿದೆ.

ಸರ್ಕಾರಿ ಶಾಲೆಗಳು :

ಸರ್ಕಾರಿ ಪ್ರೌಢಶಾಲೆ ಜಯನಗರ, ಸರ್ಕಾರಿ ಪ್ರೌಢಶಾಲೆ ಬೆಳ್ಳೂರು, ಸರ್ಕಾರಿ ಪ್ರೌಢಶಾಲೆ ಹೊಸನಗರ, ಸರ್ಕಾರಿ ಪ್ರೌಢಶಾಲೆ ಸೊನಲೆ, ಸರ್ಕಾರಿ ಪ್ರೌಢಶಾಲೆ ಕಾರಣಗಿರಿ, ಸರ್ಕಾರಿ ಪ್ರೌಢಶಾಲೆ ನಗರ, ಸರ್ಕಾರಿ ಪ್ರೌಢಶಾಲೆ ಹೆದ್ದಾರಿಪುರ, ಸರ್ಕಾರಿ ಪ್ರೌಢಶಾಲೆ ಕಾನುಗೋಡು, ಸರ್ಕಾರಿ ಪ್ರೌಢಶಾಲೆ ಮಸಗಲ್ಲಿ, ಸರ್ಕಾರಿ ಪ್ರೌಢಶಾಲೆ ಕೋಡೂರು, ಸರ್ಕಾರಿ ಪ್ರೌಢಶಾಲೆ ನಿಟ್ಟೂರು, ಸರ್ಕಾರಿ ಪ್ರೌಢಶಾಲೆ ಸಂಪೆಕಟ್ಟೆ, ಸರ್ಕಾರಿ ಪ್ರೌಢಶಾಲೆ ಚಿಕ್ಕಜೇನಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಫ್ರೌಢ ಶಾಲೆ ವಿಭಾಗ ಹೊಸನಗರ ಶೇ.100 ಫಲಿತಾಂಶ ಗಳಿಸಿವೆ.

inshot_20260423_2333312886689946099847169184.jpg

ಅನುದಾನಿತ ಪ್ರೌಢಶಾಲೆಗಳು :

ನಗರ ಪ್ರೌಢಶಾಲೆ ನಗರ, ಮಲೆನಾಡು ಪ್ರೌಢಶಾಲೆ ಹೊಸನಗರ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಗೇರುಪುರ, ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಹುಂಚ (ಯಳಗಲ್ಲು) ಶೇ.100 ಫಲಿತಾಂಶ ಗಳಿಸಿವೆ.

ಅನುದಾನ ರಹಿತ ಪ್ರೌಢಶಾಲೆಗಳು :

ಹೋಲಿ ರಿಡೀಮರ್ ಪ್ರೌಢಶಾಲೆ ಹೊಸನಗರ, ಕುವೆಂಪು ವಿದ್ಯಾ ಶಾಲೆ ಹೊಸನಗರ, ಗುರೂಜಿ ಪ್ರೌಢಶಾಲೆ ಹೊಸನಗರ, ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರ, ಕೆಪಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಾಸ್ತಿಕಟ್ಟೆ, ಶ್ರೀರಾಮಕೃಷ್ಣ ವಿದ್ಯಾ ಶಾಲೆ ಬಟ್ಟೆಮಲ್ಲಪ್ಪ, ಪ್ರಜ್ಞಾ ಭಾರತಿ ವಿದ್ಯಾಸಂಸ್ಥೆ ನಿಟ್ಟೂರು, ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಿಪ್ಪನ್‌ಪೇಟೆ, ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯ ರಿಪ್ಪನ್‌ಪೇಟೆ, ಅಮೃತ ವಿದ್ಯಾಲಯ ನಗರ ಈ ಶಾಲೆಗಳು ಶೇ. 100 ಸಾಧನೆ ಗಳಿಸಿದೆ.

​ಉಳಿದಂತೆ ಮಾರುತಿಪುರ (ಶೇ. 99), ರಿಪ್ಪನ್‌ಪೇಟೆ (ಶೇ. 98), ಅಮೃತ (ಗರ್ತಿಕೆರೆ) (ಶೇ. 97.14), ಯಡೂರು (ಶೇ. 97) ಹಾಗೂ ಅರಸಾಳು (ಶೇ. 92) ಶಾಲೆಗಳು ಕೂಡ ಅತ್ಯುತ್ತಮ ಪ್ರಗತಿ ಸಾಧಿಸಿವೆ.

ಒಟ್ಟು ಪರೀಕ್ಷೆಗೆ ಕುಳಿತ 1546 ವಿದ್ಯಾರ್ಥಿಗಳಲ್ಲಿ 1529 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 17 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಹೊಸನಗರಕ್ಕೆ ಮೂರನೇ ಸ್ಥಾನ !

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ತಾಲೂಕು
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.98.90 ಫಲಿತಾಂಶದೊಂದಿಗೆ ಮೂರನೇ ಸ್ಥಾನ ಗಳಿಸಿದ್ದು ವಿದ್ಯಾರ್ಥಿಗಳ ಸಾಧನೆಗೆ ಸಾಗರ ಕ್ಷೇತ್ರದ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವೃಂದದವರನ್ನ ಅಭಿನಂದಿಸಿದ್ದಾರೆ.

Leave a Comment