ಹೊಸನಗರ

ಹೊಸನಗರ ತಾಲೂಕು ಗಂಗಾಮತಸ್ಥರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ರಿಪ್ಪನ್‌ಪೇಟೆ : ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಚಿದಂಬರ ಹೆಚ್ ಬಿ ಆಯ್ಕೆಯಾಗಿದ್ದಾರೆ.

ರಿಪ್ಪನ್‌ಪೇಟೆಯ ಗಂಗಾಮತಸ್ಥರ ಸಂಘದ ಸಭಾಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ಚುನಾವಣೆಯಲ್ಲಿ ವಿಜೇತರಾದ
ಗಂಗಾಮತಸ್ಥ ಸಮಾಜದ ಉಪಾಧ್ಯಕ್ಷರಾಗಿ ಗಣಪತಿ ಬಿ.ಕೆ ಹಾಗೂ ಬೆನಕಪ್ಪ ಎಂ., ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಜಿ. ಸಹ ಕಾರ್ಯದರ್ಶಿಯಾಗಿ ಪ್ರಕಾಶ್ ಕೆ.ಡಿ., ಖಜಾಂಚಿಯಾಗಿ ರಾಘವೇಂದ್ರ ಜಿ.ಬಿ. ಹಾಗೂ ನಿರ್ದೇಶಕರಾಗಿ ರುಕ್ತೇಶ್ ಚಂದಳ್ಳಿ, ನಾಗೇಂದ್ರ ಎಲ್., ದೇವೇಂದ್ರಪ್ಪ ಕೆ. ಶಾಂತಪ್ಪ ಜಿ, ಉಮೇಶ್ ಬಿ, ದಿನೇಶ್ ಅರಳಿಕೊಪ್ಪ, ಸುನಿಲ್ ಟಿ, ಶಿವಾನಂದ ಎಸ್ ಎಂ, ಮಂಜುನಾಥ ಎಸ್ ಬ್ಯಾಣದ, ಶಿವಾನಂದ ಎಸ್, ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಸರ್ವರಿಗೂ ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜ ಭಾಂದವರು ಗಂಗಾಮತ ಸಮಾಜದ ಏಳಿಗೆಗೆ ಶ್ರಮಿಸಲಿ ಎಂದು ಶುಭ ಹಾರೈಸಿದ್ದಾರೆ.

ಚುನಾವಣಾ ಕಾರ್ಯವನ್ನು ಹಾಲಿ ಅಧ್ಯಕ್ಷ ಉಮೇಶ್ ಕೆ ವೈ ಉಪಸ್ಥಿತಿಯಲ್ಲಿ ಲೋಹಿತ್ ಕುಮಾರ್ ಹೆಚ್ ಹಾಗೂ ನಾಗೇಶ್ ಚಂದಳ್ಳಿ ನಿರ್ವಹಿಸಿದರು.

Leave a Comment