ಹೊಸನಗರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

Written by Mahesha Hindlemane

Published on:

ಹೊಸನಗರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಸಭಾಂಗಣದಲ್ಲಿ ಜಾಗೃತಿಕ ಕಾರ್ಯಕ್ರಮವಾಗಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಡೆಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಿಲ್ಲಾ ಜನಜಾಗೃತಿ ಯೋಜನೆಯ ಸದಸ್ಯ ಎನ್ ಆರ್ ದೇವಾನಂದ್ ಅಧ್ಯಕ್ಷತೆಯಲ್ಲಿ, ಯೋಜನೆಯ ಅಧ್ಯಕ್ಷ ಮೋಹನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭ ಸಾರ್ವಜನಿಕ ಆಸ್ಪತ್ರೆಯ ಏಡ್ಸ್ ಮತ್ತು ಹೆಚ್ಐವಿ ಆಪ್ತ ಸಮಾಲೋಚಕಿ ಸುಷ್ಮಾ ಶ್ರೀನಿವಾಸ್ ಹೆಬ್ಬಾರ್, ಆರೋಗ್ಯ ಶಿಕ್ಷಕಿ ಕರಿಬಸಮ್ಮ, ಒಕ್ಕೂಟದ ಪದಾಧಿಕಾರಿಗಳು ನೇತ್ರಾವತಿ, ರಾಮಕೃಷ್ಣ, ಪ್ರಭುಗೌಡ, ಉದಯ ನಾಗರತ್ನ ಸೇವಾ ಪ್ರತಿನಿಧಿ ಹರ್ಷ ಮತ್ತು ಸುಮತಿ ಉಪಸ್ಥಿತರಿದ್ದು ಮಾತನಾಡಿ, ತಂಬಾಕು ಸೇವನೆಯು ದೈಹಿಕ ಆರೋಗ್ಯಕ್ಕೂ, ಆರ್ಥಿಕ ಸ್ಥಿತಿಗೂ ಭೀಕರ ಹಾನಿ ಉಂಟುಮಾಡುವ ಮೂಲಕ ಸಾಮಾಜಿಕ ಪರಿಣಾಮಗಳನ್ನುಂಟುಮಾಡುವುದಾಗಿ ವಿವರಿಸಿದರು.

ತಂಬಾಕು ಸೇವನೆಯು ಏಡ್ಸ್ ಮತ್ತು ಹೆಚ್ಐವಿ ಸೋಂಕುಗಳ ಹರಡುವಿಕೆಗೂ ಕಾರಣವಾಗುವಂತಹ ಭೀಕರ ಸಮಸ್ಯೆಯಾಗಿದ್ದು, ತಾಯಂದಿರಿಗೆ ತಮ್ಮ ಮಕ್ಕಳ ಚಲನಚರ್ಯೆಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಭಾರತದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದುದು ಒಂದು ದುಃಖದ ಸಂಗತಿ ಎಂದು ಅವರು ಹೇಳಿದರು.

ಆರೋಗ್ಯವಂತ ಬದುಕನ್ನು ಕಾಪಾಡಲು ಮುಂದಿನ ಪೀಳಿಗೆಯನ್ನು ವ್ಯಸನ ಮುಕ್ತಗೊಳಿಸುವುದು ಅತ್ಯವಶ್ಯಕವಾಗಿದೆ. ಈ ಕಾರ್ಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ದೃಢ ಸಂಕಲ್ಪ ಹೊಂದುವುದು ಮಹತ್ವಪೂರ್ಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಶಾ ಪ್ರಾರ್ಥಿಸಿದರು. ಮೇಲ್ವಿಚಾರಕ ಗಣಪತಿ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment