ಹೊಸನಗರ

ಕ್ಷೀಣಿಸಿದ ಮಳೆ ; ಚುರುಕುಗೊಂಡ ಭತ್ತದ ನಾಟಿ ಕಾರ್ಯ

ಕ್ಷೀಣಿಸಿದ ಮಳೆ ; ಚುರುಕುಗೊಂಡ ಭತ್ತದ ನಾಟಿ ಕಾರ್ಯ – InShot 20260803 190306335

ರಿಪ್ಪನ್‌ಪೇಟೆ : ಮಲೆನಾಡಿನ ನಡುಮನೆ ಎಂದೇ ಖ್ಯಾತಿ ಹೊಂದಿರುವ ಹೊಸನಗರ ತಾಲೂಕಿನಾದ್ಯಂತ ಕಳೆದ ಎರಡು ದಿನಗಳ ಕಾಲ ಉತ್ತಮ ಮಳೆಯಾಗಿದ್ದು ನಿನ್ನೆಯಿಂದ ಮಳೆ ಕ್ಷೀಣಿಸಿದ್ದು ಭತ್ತದ ನಾಟಿ ಕಾರ್ಯವನ್ನು ರಿಪ್ಪನ್‌ಪೇಟೆ ಭಾಗದ ರೈತಾಪಿ ವರ್ಗ ಚುರುಕುಗೊಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕಳೆದ ಎರಡು ದಿನಗಳ ಕಾಲ ಆರ್ಭಟಿಸಿದ ಮುಂಗಾರು ಮಳೆ ಈಗ ಬಿಡುವು ನೀಡುವುರೊಂದಿಗೆ ಕೃಷಿ ಕಾರ್ಯಕ್ಕೆ ಚುರುಕು ಮುಟ್ಟಿಸಿದೆ. ಮಲೆನಾಡಿನ ವ್ಯಾಪ್ತಿಯಲ್ಲಿ ಸರಿಯಾಗಿ ಮಳೆ ಸುರಿಯದ ಕಾರಣ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಸರಿಯಾಗಿ ಹರಿಯದೆ, ತುಂಬಿಕೊಳ್ಳದೆ ಇದ್ದು ಮುಂದೆ ಹೇಗೆ ಎಂಬ ಜಿಜ್ಞಾಸೆಯಲ್ಲಿ ರೈತಾಪಿ ವರ್ಗ ಚಿಂತಿಸುವಂತಾಗಿದೆ.

ಈಗಾಗಲೇ ವರದಿಯಾಗಿರುವಂತೆ ಹೊಸನಗರ ತಾಲ್ಲೂಕಿನ 149.40 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿರುವ ಬೆನ್ನಲ್ಲೇ ತಾಲ್ಲೂಕಿನ ನಗರದಲ್ಲಿ 261.0 ಮಿ.ಮೀ., ಅಂಡಗದೋದೂರು 260.5 ಮಿ.ಮೀ. ಯಡೂರು 239.5, ಕರಿಮನೆ 238.5 ಮಿ.ಮೀ.ಹೀಗೆ ಮಳೆ ಮಾಪಕದಲ್ಲಿ ಸುರಿದ ಮಳೆಯ ಪ್ರಮಾಣ ದಾಖಲಾಗಿದ್ದರೆ ತಾಲ್ಲೂಕಿನ ಕೆರೆಹಳ್ಳಿ, ಹುಂಚ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ವಾಡಿಕೆ ಮಳೆಗಿಂದ ಭಾರಿ ಕಡಿಮೆ ಮಳೆಯಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಒಟ್ಟಾರೆಯಾಗಿ ಮಧ್ಯ ಮಲೆನಾಡಿನಲ್ಲಿ ಈ ರೀತಿ ಮಳೆ ಕ್ಷೀಣಿದರೆ ಮುಂದಿನ ವರ್ಷದಲ್ಲಿ ಕುಡಿಯುವ ನೀರಿಗೂ, ತಿನ್ನುವ ಅನ್ನಕ್ಕೂ ಕೊರತೆ ಎದುರಾಗುವ ಕಾಲ ದೂರವಿಲ್ಲ ಎಂದು ರೈತ ಮುಖಂಡ ಆರ್.ಎನ್.ಮಂಜುನಾಥ, ಕುಕ್ಕಳಲೇ ಈಶ್ವರಪ್ಪಗೌಡ ತೀವ್ರ ಕಳವಳ ವ್ಯಕ್ತಪಡಿಸಿ ಸರ್ಕಾರ ಈ ಕೂಡಲೇ ಹೊಸನಗರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಸರ್ಕಾರ ಈ ಮೇಲ್ಕಂಡ ನಗರ ಹೋಬಳಿ ವ್ಯಾಪ್ತಿಯ ಮಳೆ ಮಾಪನದ ವರದಿಯನ್ನಾದರಿಸಿ ವರದಿ ನೀಡದೆ ಹೊಸನಗರ ತಾಲ್ಲೂಕಿನ ಕಸಬಾ, ಹುಂಚ ಹಾಗೂ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಮಳೆಮಾಪನಗಳಲ್ಲಿ ವರದಿಯ ಬಗ್ಗೆ ಸಮಗ್ರವಾಗಿ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸರ್ಕಾರಕ್ಕೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯದರ್ಶಿಗಳು ವರದಿ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]