ಹೊಸನಗರ

ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿಗೆ ಶೀಘ್ರದಲ್ಲೇ ಸಹಕಾರ ಸಂಘ, ಚಿಟ್‌ಫಂಡ್ ಆರಂಭ: ಸಿ.ಎಂ. ರಾಜಣ್ಣ

ಮದ್ಯ ಮಾರಾಟಗಾರರ ಸಂಘದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಹಾಗೂ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅತ್ತಿಕೊಡಿಗೆ ವಾಣಿಜ್ಯ ಮಳಿಗೆ ಮತ್ತು ಲಾಡ್ಜ್ ಮಾಲೀಕ ನಾಗಪ್ಪಗೌಡ ಅವರನ್ನು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Atthikodige Nagappa

ಹೊಸನಗರ: ಮದ್ಯ ಮಾರಾಟಗಾರರ ಸಂಘದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಹಾಗೂ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅತ್ತಿಕೊಡಿಗೆ ವಾಣಿಜ್ಯ ಮಳಿಗೆ ಮತ್ತು ಲಾಡ್ಜ್ ಮಾಲೀಕ ನಾಗಪ್ಪಗೌಡ ಅವರನ್ನು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇವರು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅತ್ತಿಕೊಡಿಗೆ ಜಾನಕಮ್ಮನವರ ಪತಿಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ನಾಗಪ್ಪಗೌಡ ವಾಣಿಜ್ಯ ಸಂಕೀರ್ಣದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಮಾಸಿಕ ಸಭೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.

ಶೀಘ್ರದಲ್ಲೇ ಸಹಕಾರ ಸಂಘ, ಚಿಟ್‌ಫಂಡ್ ಸ್ಥಾಪನೆ: ಸಿ.ಎಂ. ರಾಜಣ್ಣ

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎಂ. ರಾಜಣ್ಣ, “ಕಳೆದ 13 ವರ್ಷಗಳಿಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಘದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಮತ್ತು ಹೊಂದಾಣಿಕೆ ಇದೆ. ಸಂಘದ ಒಗ್ಗಟ್ಟಿನಿಂದಾಗಿ ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಮಳಿಗೆಯೂ ಬಂದ್ ಆಗದಂತೆ ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದು, ನಮ್ಮ ಜಿಲ್ಲಾ ಘಟಕ ರಾಜ್ಯಕ್ಕೇ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಸಂಘದ ಸದಸ್ಯರ ಆರ್ಥಿಕ ಅನುಕೂಲಕ್ಕಾಗಿ ಪ್ರತ್ಯೇಕ ಸಹಕಾರ ಸಂಘ (ಕೋ-ಆಪರೇಟಿವ್ ಸೊಸೈಟಿ) ಹಾಗೂ ಚಿಟ್‌ಫಂಡ್ ಆರಂಭಿಸಲು ಉದ್ದೇಶಿಸಲಾಗಿದೆ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಕಬಡ್ಡಿ ರಾಜಣ್ಣ (ಶಿಕಾರಿಪುರ), ಕಾರ್ಯದರ್ಶಿ ತಿಪ್ಪೇಸ್ವಾಮಿ (ಶಿವಮೊಗ್ಗ), ತಾಲೂಕು ಘಟಕದ ಅಧ್ಯಕ್ಷ ಜಯನಗರ ಚೇತನ್, ಜಿಲ್ಲಾ ನಿರ್ದೇಶಕರಾದ ಎಂ.ಬಿ. ಲಕ್ಷಣಗೌಡ (ರಿಪ್ಪನ್‌ಪೇಟೆ), ಗುಂಡಪ್ಪ ಗೌಡ, ಯೋಗೇಶ್ (ಭದ್ರಾವತಿ), ಎಂ.ಬಿ. ಮಂಜುನಾಥ್ (ತೀರ್ಥಹಳ್ಳಿ), ತಾಲೂಕು ಕಾರ್ಯದರ್ಶಿ ಪ್ರದೀಪ್ ಹೆಗ್ಡೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]