ನಿವೃತ್ತ ಸೇನಾಧಿಕಾರಿ ಕೃಷ್ಣಮೂರ್ತಿಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ

Written by Mahesha Hindlemane

Published on:

ರಿಪ್ಪನ್‌ಪೇಟೆ ; ದೇಶದ ಸೇನಾ ಪಡೆಯಲ್ಲಿ ಕಳೆದ 40 ವರ್ಷಗಳ ಕಾಲ ಸುದಿರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ಕೃಷ್ಣಮೂರ್ತಿ ಕೆ.ವಿ. ಯವರಿಗೆ ರಿಪ್ಪನ್‌ಪೇಟೆಯಲ್ಲಿ ತೆರೆದ ವಾಹನದಲ್ಲಿ ಡೊಳ್ಳಿನ ಮೆರವಣಿಗೆ ಮೂಲಕ ಕರೆತರುವುದರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಸಂದರ್ಭದಲ್ಲಿ ಹುಟ್ಟೂರಿನ ಅಭಿಮಾನಿಗಳು ಕುಟುಂಬ ವರ್ಗ ಸೇರಿದಂತೆ ರಿಪ್ಪನ್‌ಪೇಟೆಯ ಸಾರ್ವಜನಿಕರು ನಿವೃತ್ತ ಸೇನಾಧಿಕಾರಿ ಕೃಷ್ಣಮೂರ್ತಿ ಕೆ.ವಿ. ಇವರ ಸೇವೆಯನ್ನು ಪ್ರಶಂಸಿಸಿದರು.

ಸ್ವಯಂ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ಸೇನಾನಿ ಕೃಷ್ಣಮೂರ್ತಿಯವರನ್ನು ಸ್ವಾಗತಿಸುವುದರೊಂದಿಗೆ ಸಿದ್ದಪ್ಪನಗುಡಿಯಿಂದ ತೆರೆದ ವಾಹನದಲ್ಲಿ ಕುಟುಂಬದವರೊಂದಿಗೆ ವಿನಾಯಕ ವೃತ್ತದವರೆಗೆ ಮೆರೆವಣಿಗೆ ಮೂಲಕ ಕರೆತರುವುದರೊಂದಿಗೆ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

Leave a Comment