ಜೂ.20ರಿಂದ ಅ. 7ರವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ; ತಹಸೀಲ್ದಾರ್ ಭರತ್‌ರಾಜ್

Written by Mahesha Hindlemane

Published on:

ಹೊಸನಗರ : ತಾಲ್ಲೂಕಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಜೂನ್ 20ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ ಎಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್‌ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 62 ಮತಗಟ್ಟೆಗಳು ಹಾಗೂ 117-ಸಾಗರ ವಿಧಾನಸಭಾ ಕ್ಷೇತ್ರದ 70 ಮತಗಟ್ಟೆಗಳು ಸೇರಿ ಒಟ್ಟು 132 ಮತಗಟ್ಟೆಗಳಿದ್ದು, ಹೊಸನಗರ ತಾಲ್ಲೂಕಿನಲ್ಲಿ ಪ್ರಸ್ತುತ 132 ಮತಗಟ್ಟೆಗಳಿದ್ದು, 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು 22986, ಮಹಿಳೆಯರು 23440, ಒಟ್ಟು 46426 ಮತದಾರರು ಇದ್ದಾರೆ. ಇದರಲ್ಲಿ ಈಗಾಗಲೇ 43994 ಮತದಾರರ ಮ್ಯಾಪಿಂಗ್ ಮಾಡಲಾಗಿದೆ. ಶೇ 94.76 ರಷ್ಟು ಸಾಧನೆಯಾಗಿದೆ. ಇನ್ನೂ 2432 ಮತದಾರರ ಮ್ಯಾಪಿಂಗ್ ಮಾಡುವುದಷ್ಟೆ ಬಾಕಿ ಉಳಿದಿದೆ ಹಾಗೂ 117-ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ 27502, ಮಹಿಳೆಯರು 28217, ಒಟ್ಟು 55719 ಮತದಾರರು ಇದ್ದಾರೆ. ಇದರಲ್ಲಿ ಈಗಾಗಲೇ 51304 ಮತದಾರರ ಮ್ಯಾಪಿಂಗ್ ಮಾಡಲಾಗಿದೆ. ಶೇ 92.08 ರಷ್ಟು ಸಾಧನೆಯಾಗಿದೆ. ಇನ್ನೂ 4415 ಮತದಾರರ ಮ್ಯಾಪಿಂಗ್ ಮಾಡುವುದಷ್ಟೆ ಬಾಕಿ ಉಳಿದಿದೆ. ಎಂದರು.

ಬಾಕಿ ಉಳಿದಿರುವ ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲು ಬಿಎಲ್‌ಓ ನೇತೃತ್ವದಲ್ಲಿ ಜೂ.20ರಿಂದ 29ರವರೆಗೂ ತರಬೇತಿ ಸಿದ್ದತೆ ಮತ್ತು ಮುದ್ರಣ, 30ರಿಂದ ಜು.29ರವರೆಗೂ ಮನೆ, ಮನೆ ಭೇಟಿ, 29ರಂದು ಮತಗಟ್ಟೆ ತರ್ಕಬದ್ದತೆ, ಆ.5ರಂದು ಮತದಾರರ ಪಟ್ಟಿಯ ಪ್ರಕಟಣೆ 5 ರಿಂದ ಸೆ.4ರ ವರೆಗೂ ಮತದಾರರಿಂದ ದೂರು ಮತ್ತು ಆಕ್ಷೇಪಣೆಗಳಿದ್ದರೆ ಸ್ವೀಕರಿಸುವುದು, ಅ.3ರೊಳಗೆ ನಿಗದಿಪಡಿಸಿದ ಅವಧಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾದ ಮತದಾರರ ಪಟ್ಟಿಯ ಸೇರ್ಪಡೆ ಹಕ್ಕು ಮತ್ತು ಆಕ್ಷೇಪಣೆಗಳ ಬಗ್ಗೆ ನೋಟಿಸ್ ಜಾರಿ ಮಾಡಿ ಅವುಗಳನ್ನು ಕಾನೂನು ಬದ್ದವಾಗಿ ಪರಿಶೀಲಿಸಿ ವಿಲೇವಾರಿ ಮಾಡುವುದು ಹಾಗೂ ಅ.7ರಂದು ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಈ ಕಾರ್ಯಕ್ಕೆ ತಾಲೂಕಿನ ಎಲ್ಲಾ ಮತದಾರರು ಸಹಕರಿಸುವಂತೆ ಮನವಿ ಮಾಡಿದರು.

ಸುದ್ಧಿಗೋಷ್ಠಿ ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಹಾಗೂ ಮ್ಯಾಪಿಂಗ್ ಕಾರ್ಯದ ಬಗ್ಗೆ ಮಾಹಿತಿ ನೀಡಲಾಯಿತು.

Leave a Comment