ರಿಪ್ಪನ್ಪೇಟೆ : ಇಲ್ಲಿನ ರೋಟರಿ ಕ್ಲಬ್ ಇವರ 2026-27ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜುಲೈ 4 ರಂದು ಸಂಜೆ 5.30 ಕ್ಕೆ ರಿಪ್ಪನ್ಪೇಟೆಯ ಜಿ.ಎಸ್.ಬಿ.ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ರೊ. ಕೃಷ್ಣರಾಜ್ ಎ.ಎಂ. ತಿಳಿಸಿದರು.
ಶಿವಮೊಗ್ಗ ರಸ್ತೆಯಲ್ಲಿನ ರೋಟರಿ ಕ್ಲಬ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್ ಇವರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೊ. ರವೀಂದ್ರ ಬಲ್ಲಾಳ್ ಕೆ. ಹಾಗೂ ಕಾರ್ಯದರ್ಶಿಯಾಗಿ ರೊ. ರಮೇಶ್ಹೆಬ್ಬಾರ್ (ರಾಮು) ಅಧಿಕಾರ ಸ್ವೀಕಾರ ಮಾಡುವರು.
ಜಿಲ್ಲಾ ಎಲೆಕ್ಟ್ ಗವರ್ನರ್ ರೊ. ಸವಂತ ಹೋಬಳಿದಾರ್ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡುವರು. ಅಸಿಸ್ಟೆಂಟ್ ಗವರ್ನರ್ ರೊ. ಪಿಹೆಚ್ಎಫ್ ನಾಗರಾಜ್ ಎಸ್, ಝೋನಲ್ ಲೆಪ್ಟಿನೆಂಟ್ ರೊ. ವಿಷ್ಣುಮೂರ್ತಿ ಎಸ್.ಎಂ.ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ, ಗಣೇಶಕಾಮತ್, ಜೆ.ರಾಧಾಕೃಷ್ಣ, ಡಾಕಪ್ಪ, ನಿ.ಮುಖ್ಯ ಶಿಕ್ಷಕ ರಾಧಾಕೃಷ್ಣ ಆರ್, ನೂತನ ಸಮಿತಿಯ ಅಧ್ಯಕ್ಷ ರವೀಂದ್ರ ಬಲ್ಲಾಳ್, ರಮೇಶ್ ಹೆಬ್ಬಾರ್, ಕೃಷ್ಣರಾಜ್ ಹಾಗೂ ಸಬಾಸ್ಟಿನ್ ಮಾಥ್ಯೂಸ್, ಶಿವಕುಮಾರ್ ಶೆಟ್ಟಿ ಇನ್ನಿತರ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





