ಹೊಸನಗರ ; 2026- 27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) ಯೋಜನೆಯಡಿಯಲ್ಲಿ ಅಡಿಕೆ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಹೊಸನಗರ ತಾಲೂಕಿನ ರೈತ ಬಾಂಧವರು ಮೈಲುತುತ್ತ, ಪ್ರೋಪಿಕೋನಾಜೋಲ್, ಪ್ರೋಪಿನೆಬ್, ಟೇಬುಕೋನಾಜೋಲ್ ಖರೀದಿಸಿ ಉಪಯೋಗಿಸಿಕೊಂಡಿದ್ದಲ್ಲಿ ಪ್ರಸಕ್ತ ವರ್ಷದಲ್ಲಿ ಖರೀದಿಸಿದ GST ಬಿಲ್, ಜಮೀನಿನ ಅಡಿಕೆ ಬೆಳೆ ಹೋಂದಿರುವ ಪಹಣಿ (RTC), ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನೊಂದಿಗೆ ಕಚೇರಿಯಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಹೊಸನಗರ ಹಿ.ಸ.ತೋ.ನಿರ್ದೇಶಕ ಟಿ.ಸಿ. ಪುಟ್ಟಾನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟೇರ್ ವಿಸ್ತೀರ್ಣಕ್ಕೆ ಗರಿಷ್ಠ ₹ 3000 ಸಹಾಯಧನ ನೀಡಲಾಗುವುದು. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಮುಂದುವರೆದು SC/ST ರೈತರು ಈ ಮೇಲೆ ತಿಳಿಸಿದ ದಾಖಲೆಯೊಂದಿಗೆ ಜಾತಿ ಪ್ರಮಾಣ ಪತ್ರ ನೀಡಲು ತಿಳಿಸಲಾಗಿದೆ.
ಇದಲ್ಲದೆ ಕೀಟರೋಗ ನಿಯಂತ್ರಣ ಯೋಜನೆ (NHM) ಅಡಿಯಲ್ಲಿ ಮೈಲಿತುತ್ತ ಖರೀದಿಸಿದ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದಲ್ಲಿ ಪ್ರತಿ ರೈತರಿಗೆ 2 ಹೆಕ್ಟೇರ್ ಗರಿಷ್ಟ ₹ 3000 ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ರೈತ ಸಂಪರ್ಕ ಅಧಿಕಾರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ರೈತ ಸಂಪರ್ಕ ಕೇಂದ್ರ :
- ಕಸಬಾ ಮತ್ತು ಕೆರೆಹಳ್ಳಿ : ಚಂದ್ರಶೇಖರ ಸ.ತೋ.ಅ ಮೊ – 9481501571
- ನಗರ ಮತ್ತು ಹುಂಚ : ರಮೇಶ್ ಹೂಗರ್ ಮೊ – 9916840682

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





