ಹೊಸನಗರ

ಭ್ರಷ್ಟಾಚಾರ ಬಯಲಿಗೆ ತರಲು ಪ್ರಮುಖ ಮಾಹಿತಿ ಹಕ್ಕು ಪ್ರಬಲ ಬ್ರಹ್ಮಸ್ತ್ರ

ಹೊಸನಗರ : ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುವ ಉದ್ದೇಶದಿಂದ ಜಾರಿಗೆ ಬಂದಂತಹ ಮಾಹಿತಿ ಹಕ್ಕು ನಿಯಮದಿಂದ ಸರ್ಕಾರದ ಅಧಿಕಾರಿಗಳು ಮತ್ತು ಆಭಿವೃದ್ದಿ ಕಾಮಗಾರಿಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಪ್ರಮುಖವಾಗಿರುವ ಮಾಹಿತಿ ಹಕ್ಕು ಒಂದು ಬ್ರಹ್ಮಸ್ತ್ರವಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಮಾಧ್ಯಮ ಕಾರ್ಯದರ್ಶಿ ವೆಂಕಟೇಶ್ ಸಿ ಹೇಳಿದರು.

ತಾಲೂಕಿನ ರಿಪ್ಪನ್‌ಪೇಟೆ ಬರುವೆ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹೊಸನಗರ ತಾಲ್ಲೂಕು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾರದರ್ಶಕತೆ ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಸಲುವಾಗಿ ಸರ್ಕಾರಿ ದಾಖಲೆಗಳ ಪರಿವೀಕ್ಷಣೆ ನಕಲುಗಳನ್ನು ಪಡೆಯುವ ಸದುದ್ದೇಶದಿಂದ ಕೇಂದ್ರ ಸರ್ಕಾರ 2005 ರಂದು ಮಾಹಿತಿ ಹಕ್ಕು ಅಧಿನಿಯಮ ಅಸ್ತಿತ್ವಕ್ಕೆ ಬಂದಿದೆ.ಈ ನಿಯಮದಿಂದಾಗಿ ಸರ್ಕಾರದ ಸಾರ್ವಜನಿಕ ಪ್ರಾಧಿಕಾರದ ದಿನನಿತ್ಯದ ಕಾರ್ಯನಿರ್ವಹಣೆಯಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರದ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ಭಾರತದ ಪ್ರತಿಯೊಬ್ಬ ನಾಗರೀಕರುಗಳಿಗೆ ಹಕ್ಕಿನ ರೂದಲ್ಲಿ ಮಾಹಿತಿ ಹಕ್ಕು ಬ್ರಹ್ಮಸ್ತ್ರವಾಗಿದೆ ಎಂದರು.

ಶಿವಮೊಗ್ಗ ಜಿಲ್ಲಾ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಅಧ್ಯಕ್ಷ ಸಿ ಮೂರ್ತಿ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಬಲ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಸಮಾಜದ ಸಮಸ್ಯೆಗಳ ಕುರಿತು ಎಚ್ಚರಿಸಲು ಇದೊಂದು ಮಾನದಂಡವಾಗಿದೆ. ಸಾರ್ವಜನಿಕರು ಸ್ವತಂತ್ರ್ಯವಾಗಿ ಯಾವುದೇ ಭಯವಿಲ್ಲದೆ ಸಕಾಧರಿ ಅಧಿಕಾರಿಗಳನ್ನು ಮಾಹಿತಿ ಹಕ್ಕಿನ ಮೂಲಕ ಪ್ರಶ್ನಿಸಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಸಹಕಾರಿಯಾಗಿದೆ.

inshot_20260801_1759138796891112614287545296

ರಾಜ್ಯ ಜೆಡಿಎಸ್ ಮುಖಂಡ ಆರ್.ಎ. ಚಾಬುಸಾಬ್, ರೈತಮುಖಂಡ ಕುಕ್ಕಳಲೇ ಈಶ್ವರಪ್ಪಗೌಡ, ಹೊಸನಗರ ತಾಲ್ಲೂಕು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಅಧ್ಯಕ್ಷ ಗಣೇಶ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿ.ಗೌಡ, ಮಂಜುನಾಥ, ಅಯಬ್‌ಸಾಬ್, ಕವಿತಾ ನವ್ಯ, ಪ್ರಭಾವತಿ ಶಿಕಾರಿಪುರ, ಕವಿತಾ ಶಿಕಾರಿಪುರ ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕವಿತಾ ನವ್ಯ ಪ್ರಾರ್ಥಿಸಿದರು. ಮಧುಸೂಧನ ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Comment