ಮಲೆನಾಡಿನ ವಿಶ್ವಾಸಾರ್ಹ ಸುದ್ದಿ · ಶಿವಮೊಗ್ಗ · ಚಿಕ್ಕಮಗಳೂರು · ಕರ್ನಾಟಕ
ಮುಖಪುಟಸಾಗರ
ಸಾಗರ

ಸಾಗರ : ಸೊಂಟದ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಸಾಗರ: ನಗರದ ಶ್ರೀಧರ ನಗರದಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕನನ್ನು ಆಕಾಶ್ ಎಂದು ಗುರುತಿಸಲಾಗಿದೆ. ಆಕಾಶ್ ನಗರದ ಸಿದ್ದೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕೆಲವು ದಿನಗಳ ಹಿಂದೆ ನಲ್ಲಿಯಿಂದ ನೀರು ತರಲು ಹೋದ ಸಂದರ್ಭದಲ್ಲಿ…

Koushik G K
ಪ್ರಕಟಿತ: 10 Aug 2026, 7:59 PM · ನವೀಕರಿಸಿದ: 10 Aug 2026, 8:41 PM

ಸುದ್ದಿ ಸಾರಾಂಶ

ಸಾಗರ: ನಗರದ ಶ್ರೀಧರ ನಗರದಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕನನ್ನು ಆಕಾಶ್ ಎಂದು ಗುರುತಿಸಲಾಗಿದೆ. ಆಕಾಶ್ ನಗರದ ಸಿದ್ದೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕೆಲವು ದಿನಗಳ ಹಿಂದೆ ನಲ್ಲಿಯಿಂದ ನೀರು ತರಲು…

WhatsApp Group Join Now
Telegram Group Join Now
Instagram Group Join Now
ಸ್ಥಳಸಾಗರ
ಪ್ರಕಟಿತ ಸಮಯ10 Aug 2026, 7:59 PM
ಮೂಲ ಪರಿಶೀಲನೆಸ್ಥಳೀಯ ಮಾಹಿತಿ, ಅಧಿಕೃತ ಪ್ರಕಟಣೆ ಅಥವಾ ವರದಿಗಾರರ ಪರಿಶೀಲನೆ ಆಧಾರ.
📢 Stay Updated! Join our WhatsApp Channel Now →

ಸಾಗರ: ನಗರದ ಶ್ರೀಧರ ನಗರದಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕನನ್ನು ಆಕಾಶ್ ಎಂದು ಗುರುತಿಸಲಾಗಿದೆ.

ಆಕಾಶ್ ನಗರದ ಸಿದ್ದೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕೆಲವು ದಿನಗಳ ಹಿಂದೆ ನಲ್ಲಿಯಿಂದ ನೀರು ತರಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು, ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪೆಟ್ಟಿನ ನಂತರ ತೀವ್ರ ಸೊಂಟದ ನೋವಿನಿಂದ ಬಳಲುತ್ತಿದ್ದ ಬಾಲಕ, ನೋವಿನ ಕಾರಣದಿಂದ ಮಾನಸಿಕವಾಗಿ ನೊಂದಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳವಾರದಿಂದ ಎಂದಿನಂತೆ ಶಾಲೆಗೆ ಹೋಗುವುದಾಗಿ ಮನೆಯವರ ಬಳಿ ಹೇಳಿದ್ದ ಆಕಾಶ್, ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಾಲಕನ ಸಾವಿನ ಸುದ್ದಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಶಾಲಾ ವಲಯದಲ್ಲಿ ಆಘಾತ ಮೂಡಿಸಿದೆ.

ಗಮನಿಸಿ: ನೋವು, ಒತ್ತಡ ಅಥವಾ ಮಾನಸಿಕ ತೊಂದರೆಯಿಂದ ಬಳಲುತ್ತಿರುವವರು ಕುಟುಂಬದವರು, ಶಿಕ್ಷಕರು ಅಥವಾ ವೈದ್ಯರ ನೆರವು ಪಡೆಯಬೇಕು. ತುರ್ತು ಮಾನಸಿಕ ಆರೋಗ್ಯ ನೆರವಿಗಾಗಿ Tele-MANAS 14416 ಅಥವಾ KIRAN 1800-599-0019 ಸಹಾಯವಾಣಿಯನ್ನು ಸಂಪರ್ಕಿಸಬಹುದು

ಸಂಪಾದಕೀಯ ಸೂಚನೆ: ಈ ಸುದ್ದಿಯಲ್ಲಿ ತಪ್ಪು ಅಥವಾ ತಿದ್ದುಪಡಿ ಅಗತ್ಯವಿದ್ದರೆ ನಮ್ಮ ಸಂಪರ್ಕ ಪುಟದ ಮೂಲಕ ತಿಳಿಸಿ. ಪ್ರಕಟಿತ ಮಾಹಿತಿಯನ್ನು ಪರಿಶೀಲಿಸಿ ಅಗತ್ಯವಿದ್ದರೆ ನವೀಕರಿಸಲಾಗುತ್ತದೆ.
ಸುದ್ದಿ ಹಂಚಿಕೊಳ್ಳಿ
ಲೇಖಕರ ಮಾಹಿತಿ

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ಈ ಲೇಖಕರ ಇನ್ನಷ್ಟು ಸುದ್ದಿಗಳು