ರಿಪ್ಪನ್‌ಪೇಟೆಯಲ್ಲಿ ಡೆಂಘೀ ರಣಕೇಕೆ, ಇವತ್ತು ಮತ್ತೊಂದು ಬಲಿ !

Written by Mahesha Hindlemane

Published on:

RIPPONPETE | ಪಟ್ಟಣದಲ್ಲಿ ಡೆಂಘೀ ರಣಕೇಕೆ ಹಾಕಿದ್ದು ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಹೊಸನಗರ ರಸ್ತೆಯ ನಿವಾಸಿ ಆಶಿಕ್ ರಸೂಲ್ (27) ಚಿಕಿತ್ಸೆ ಫಲಿಸದೆ ಇಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಶನಿವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಆಶಿಕ್ ರಸೂಲ್ ರವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಮೃತಪಟ್ಟಿದ್ದಾರೆ.

ಹೊಸನಗರ ರಸ್ತೆಯ ರಾಯಲ್ ಕಂಫರ್ಟ್ ಲಾಡ್ಜ್ ಮುಂಭಾಗದಲ್ಲಿ ಬದ್ರಿಯಾ ಮೊಬೈಲ್ ಸೆಂಟರ್ ನಡೆಸುತ್ತಿದ್ದ ಈತ ಜ್ವರದ ಲಕ್ಷಣ ಕಾಣಿಸಿಕೊಂಡು ಕೇವಲ ಮೂರೇ ದಿನಗಳ ಅಂತರದಲ್ಲಿ ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ಹಿನ್ನಲೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಂಜೆ ಮೃತಪಟ್ಟಿದ್ದಾರೆ‌‌.

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಒಂದೇ ವಾರದ ಅಂತರದಲ್ಲಿ ಡೆಂಘೀ ಜ್ವರ ಇಬ್ಬರನ್ನು ಬಲಿ ಪಡೆದುಕೊಂಡಿದೆ‌. ಜು.09 ರಂದು ರಶ್ಮಿ ನಾಯಕ್ ಎಂಬುವವರು ಡೆಂಘೀಗೆ ಮೃತಪಟ್ಟಿದ್ದರು.

Leave a Comment